ಮನಮೋಹನ್‌ ಪಾತ್ರದಲ್ಲಿ ಖೇರ್‌

7

ಮನಮೋಹನ್‌ ಪಾತ್ರದಲ್ಲಿ ಖೇರ್‌

Published:
Updated:
ಮನಮೋಹನ್‌ ಪಾತ್ರದಲ್ಲಿ ಖೇರ್‌

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಗ್ಗೆ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬರು ಬರೆದ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್ ಮಿನಿಸ್ಟರ್‌’ ಕೃತಿ ಸಿನಿಮಾ ಆಗುತ್ತಿರುವುದು ಗೊತ್ತಿರುವ ಸಂಗತಿ. ಆದರೆ ಪ್ರಧಾನಿ ಪಾತ್ರವನ್ನು  ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ಅಂತಿಮವಾಗಿರಲಿಲ್ಲ.

ಈ ಗೊಂದಲಗಳಿಗೆ ತೆರೆಬಿದ್ದಿದ್ದು, ಚಿತ್ರದಲ್ಲಿ ಮನಮೋಹನ್‌ ಸಿಂಗ್‌ ಪಾತ್ರವನ್ನು ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌ ನಿರ್ವಹಿಸುತ್ತಿದ್ದಾರೆ.

ವಿಜಯ್‌ ರತ್ನಾಕರ್‌ ಗುಟ್ಟೆ ನಿರ್ದೇಶನದ ಈ ಚಿತ್ರದಲ್ಲಿ ತಾನು ಸಿಂಗ್‌ ಪಾತ್ರ ಮಾಡಲಿದ್ದೇನೆ ಎಂದು 62 ವರ್ಷದ ಅನುಪಮ್‌ ಖೇರ್‌ ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್‌ ಮೆಹ್ತಾ ಚಿತ್ರಕತೆ ಬರೆಯಲಿದ್ದಾರೆ.  ಚಿತ್ರದ ಟ್ರೇಲರ್‌  ಬಿಡುಗಡೆಯಾಗಬೇಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry