‘ರಾಜಕಾರಣಿ’ ರಾನಾ

7

‘ರಾಜಕಾರಣಿ’ ರಾನಾ

Published:
Updated:
‘ರಾಜಕಾರಣಿ’ ರಾನಾ

‘ಬಾಹುಬಲಿ–2: ದಿ ಕನ್‌ಕ್ಲೂಷನ್‌’ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ರಾನಾ ದಗ್ಗುಬಾಟಿ ಅವರು  ‘ನೇನೆ ರಾಜ ನೇನೆ ಮಂತ್ರಿ’ ಚಿತ್ರದಲ್ಲಿ ರಾಜಕಾರಣಿಯಾಗಿ ಮಿಂಚಿದ್ದಾರೆ. ಈ ಚಿತ್ರದ ಟೀಸರ್‌  ಯೂಟ್ಯೂಬ್‌ನಲ್ಲಿ ಮಂಗಳವಾರ ಬಿಡುಗಡೆಯಾಗಿದೆ. 

40 ಸೆಕೆಂಡುಗಳ ಈ ಟೀಸರ್‌ನಲ್ಲಿ ಕೈಗೆ ಕೋಳ, ಮುಖಕ್ಕೆ ಕಪ್ಪು ಬಟ್ಟೆ ತೊಟ್ಟ ರಾನಾ ದಗ್ಗುಬಾಟಿ ಜೈಲಿನ ಒಳಗೆ ಹೋಗುವ ದೃಶ್ಯ ಚಿತ್ರದ ಬಗ್ಗೆ ಕುತೂಹಲ ಕೆರಳಿಸುವಂತಿದೆ.  ಟೀಸರ್‌ನಲ್ಲಿ ಬಿಳಿ ರೇಷ್ಮೆ ಶರ್ಟ್‌, ಪಂಚೆಯಲ್ಲಿ ರಾಣಾ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ತೇಜ ನಿರ್ದೇಸಿದ್ದು, ಸುರೇಶ್‌ ಬಾಬು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಕಾಜಲ್‌ ಅಗರ್ವಾಲ್‌, ಕ್ಯಾಥರಿನ್‌ ತೆರೆಸಾ, ನವದೀಪ್ ಹಾಗೂ ಆಶುತೋಷ್‌ ರಾನಾ ನಟಿಸಿದ್ದಾರೆ.

ರಾನಾ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಮೊದಲ ಚಿತ್ರ ‘ಲೀಡರ್‌’ನಲ್ಲೂ ರಾಜಕಾರಣಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು.  ಆ ಚಿತ್ರ ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಇದೀಗ ಬಹು ವರ್ಷಗಳ ನಂತರ ಮತ್ತೆ ರಾನಾ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry