ಇ-ಮೇಲ್ ಸಂದೇಶಗಳು ಸ್ಕರ್ಟ್‌ ರೀತಿ ಚಿಕ್ಕದಾಗಿರಬೇಕು: ಬಿ.ಕಾಂ ಪಠ್ಯಪುಸ್ತಕದಲ್ಲಿ ಅಚ್ಚು

7
ಸಿ.ಬಿ. ಗುಪ್ತಾ ಅವರು ಬರೆದಿರುವ ‘ಬೇಸಿಕ್ ಬಿಸಿನೆಸ್ ಕಮ್ಯೂನಿಕೇಶನ್’ ಪುಸ್ತಕ

ಇ-ಮೇಲ್ ಸಂದೇಶಗಳು ಸ್ಕರ್ಟ್‌ ರೀತಿ ಚಿಕ್ಕದಾಗಿರಬೇಕು: ಬಿ.ಕಾಂ ಪಠ್ಯಪುಸ್ತಕದಲ್ಲಿ ಅಚ್ಚು

Published:
Updated:
ಇ-ಮೇಲ್ ಸಂದೇಶಗಳು ಸ್ಕರ್ಟ್‌ ರೀತಿ ಚಿಕ್ಕದಾಗಿರಬೇಕು: ಬಿ.ಕಾಂ ಪಠ್ಯಪುಸ್ತಕದಲ್ಲಿ ಅಚ್ಚು

ನವದೆಹಲಿ: ಇ-ಮೇಲ್ ಸಂದೇಶಗಳು ಸ್ಕರ್ಟ್‌ ರೀತಿಯಲ್ಲಿ ಚಿಕ್ಕದಾಗಿ ಇರಬೇಕು ಎಂಬ ವಿವಾದಾತ್ಮಕ ವಾಕ್ಯ ಬಿ.ಕಾಂ ಪಠ್ಯಪುಸ್ತಕದಲ್ಲಿ ಅಚ್ಚಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಈ ಮೇಲಿನ ವಾಕ್ಯ ಸಿಬಿ ಗುಪ್ತಾ ಅವರು ಬರೆದಿರುವ ‘ಬೇಸಿಕ್ ಬಿಸಿನೆಸ್ ಕಮ್ಯೂನಿಕೇಶನ್’ ಎಂಬ  ಪುಸ್ತಕದಲ್ಲಿ ಮುದ್ರಣಗೊಂಡಿದೆ.

ದೆಹಲಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ವಾಣಿಜ್ಯ ವಿಭಾಗಕ್ಕೆ ಸಿಬಿ ಗುಪ್ತಾ ಅವರು ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದು, ಪ್ರಾಧ್ಯಾಪಕರು ಬಿ.ಕಾಂ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎನ್ನಲಾಗಿದೆ.

ಈ ಪುಸ್ತಕ ಪ್ರಕಟಗೊಂಡು ದಶಕವಾಗಿದ್ದು, ಅದರಲ್ಲಿ  ಇ–ಮೇಲ್ ಸಂದೇಶಗಳು ಚಿಕ್ಕದಾಗಿ ಇರಬೇಕು ಎಂಬುದನ್ನು ತಿಳಿಸಲು ಸ್ಕರ್ಟ್‌ಗೆ ಹೋಲಿಕೆ ಮಾಡಿದ್ದಾರೆ.

ಈ ಹಿಂದೆ ದ್ವಿತೀಯ ಪಿಯುಸಿಯ ಭೌತಶಾಸ್ತ್ರದ ಪುಸ್ತಕದಲ್ಲಿ ‘36’ ‘24’ ‘36’ ಇದು ಯುವತಿಯರ ಉತ್ತಮ ದೇಹದಾಕಾರ ಎಂದು ಪ್ರಕಟಗೊಂಡಿತ್ತು.

ಅಲ್ಲದೇ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಪುಸ್ತಕದಲ್ಲಿ ಭಗತ್ ಸಿಂಗ್ ಒಬ್ಬರು ಕ್ರಾಂತಿಕಾರಿ ಭಯೋತ್ಪಾದಕ ಎಂದು ಪ್ರಕಟಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry