ಇಂದಿನಿಂದ ಜನಪರ ಸಂಸ್ಕೃತಿ ಉತ್ಸವ

7

ಇಂದಿನಿಂದ ಜನಪರ ಸಂಸ್ಕೃತಿ ಉತ್ಸವ

Published:
Updated:
ಇಂದಿನಿಂದ ಜನಪರ ಸಂಸ್ಕೃತಿ ಉತ್ಸವ

ರಂಗಪಂಚಮಿ ಸಂಸ್ಥೆಯು ಜೂನ್ 8ರಿಂದ ‘ಜನಪರ ಸಂಸ್ಕೃತಿ ಉತ್ಸವ–2017’ ಆಯೋಜಿಸಿದೆ. ಉತ್ಸವವು ಒಂದು ವಾರ ನಡೆಯಲಿದ್ದು, ಜೂನ್‌ 15ರಂದು ಕೊನೆಗೊಳ್ಳಲಿದೆ.

ಹೊಸ ನಾಟಕಗಳ ಪ್ರಯೋಗ, ರಂಗ ತರಬೇತಿ, ಲಲಿತ ಕಲಾ ಶಿಬಿರ, ಆಡಳಿತ ಕನ್ನಡ ತರಬೇತಿ ಶಿಬಿರ, ಕನ್ನಡೇತರರಿಗೆ ಕನ್ನಡ ಕಲಿಕೆ ತರಬೇತಿ, ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹೀಗೆ ಸಮಾಜಮುಖಿ ಶಿಬಿರ ಮತ್ತು ಕಾರ್ಯಕ್ರಮಗಳನ್ನು ನಡೆಸುವ ರಂಗಪಂಚಮಿ ಸಂಸ್ಥೆ ಈ ಬಾರಿ ‘ಜನಪರ ಸಂಸ್ಕೃತಿ ಉತ್ಸವ’ವನ್ನು ಆಯೋಜಿಸಿದೆ.

ರಂಗ ಚಟುವಟಿಕೆಗಳಿಂದ ಗಮನಸೆಳೆಯುತ್ತಿರುವ ಸಂಸ್ಥೆ, ಪ್ರತಿ ವರ್ಷ ಸಂಸ್ಕೃತಿ ಉತ್ಸವವನ್ನು ಆಯೋಜಿಸಿ, ಒಂದೊಂದು ಹೊಸ ನಾಟಕವನ್ನು ಪ್ರದರ್ಶಿಸುವ ಜೊತೆಗೆ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಾ ಬಂದಿದೆ.

ಈ ವರ್ಷದ ಜನಪರ ಸಂಸ್ಕೃತಿ ಉತ್ಸವದಲ್ಲಿ ಜನಪದ, ವಚನಗಾಯನ, ನಾಟಕಗಳ ಪ್ರದರ್ಶನವಿರುತ್ತದೆ. ಜೊತೆಗೆ ಸಮಾಜ ಸುಧಾರಕರಿಗೆ, ಸಾಧಕರಿಗೆ ‘ನ್ಯಾಯಚೇತನ ರತ್ನ’, ‘ನಾಡಚೇತನ ರತ್ನ’, ‘ಸಿಜಿಕೆ’ ನಗದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

****

ಜನಪರ ಸಂಸ್ಕೃತಿ ಉತ್ಸವ–2017:  ಸಂಜೆ 6.30ಕ್ಕೆ ಉದ್ಘಾಟನೆ– ಡಾ. ಜಿ.ಟಿ. ಸುಭಾಷ್, ಅಧ್ಯಕ್ಷತೆ– ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಅತಿಥಿಗಳು– ಶಿವಾಜಿ ಗಣೇಶನ್, ಎಸ್‌. ಶಿವಮಲ್ಲು, ಅಶೋಕ್ ಎನ್. ಚಲವಾದಿ, ಸಂಜೆ 7ಕ್ಕೆ ‘ಮುಗ್ದ ಸಂಗಯ್ಯ’ ನಾಟಕ ಪ್ರರ್ದಶನ, ನಿರ್ದೇಶನ– ನಂಜುಂಡಸ್ವಾಮಿ ತೊಟ್ಟವಾಡಿ, ರಚನೆ– ಬ್ಯಾಡನೂರು ಶಾಂತವೀರಪ್ಪ, ತಂಡ– ರಂಗಪಂಚಮಿ ಮಹಿಳಾ ತಂಡ, ಸ್ಥಳ– ಕಲಾಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry