ಗಂಡನೊಂದಿಗೆ ಮಾತುಬಿಟ್ಟಿದ್ದ ಶ್ರೀದೇವಿ

7

ಗಂಡನೊಂದಿಗೆ ಮಾತುಬಿಟ್ಟಿದ್ದ ಶ್ರೀದೇವಿ

Published:
Updated:
ಗಂಡನೊಂದಿಗೆ ಮಾತುಬಿಟ್ಟಿದ್ದ ಶ್ರೀದೇವಿ

ಬಾಲಿವುಡ್‌ ನಟಿ ಶ್ರೀದೇವಿ ಮೂರು ತಿಂಗಳ ಕಾಲ ಪತಿ ಬೋನಿ ಕಪೂರ್‌ ಜೊತೆ ಮಾತು ಬಿಟ್ಟಿದ್ದರಂತೆ. ಪತಿಯೊಂದಿಗೆ ಏಕೆ ಮಾತು ಬಿಟ್ಟಿದ್ದರು ಎಂಬ ಕಾರಣ ಗೊತ್ತಾದರೆ ಆಶ್ಚರ್ಯವಾಗುವುದು ಖಂಡಿತ.

ಸಂಪೂರ್ಣವಾಗಿ ಚಿತ್ರದಲ್ಲಿಯೇ ತೊಡಗಿಸಿಕೊಂಡಿದ್ದ ಅವರು ನಿರ್ದೇಶಕರ ನಟಿ. ತಮ್ಮ 300ನೇ ಚಿತ್ರ ‘ಮಾಮ್‌’ ಚಿತ್ರೀಕರಣದಲ್ಲಿ ಶ್ರೀದೇವಿ ಬ್ಯುಸಿ ಆಗಿದ್ದ ಕಾರಣಕ್ಕೆ ಮೂರು ತಿಂಗಳು ಪತಿ ಬೋನಿ ಕಪೂರ್‌ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲವಂತೆ.

‘ಬೆಳಿಗ್ಗೆ ಎದ್ದು ಗುಡ್‌ ಮಾರ್ನಿಂಗ್‌, ಬಳಿಕ ಚಿತ್ರೀಕರಣಕ್ಕೆ ಹೊರಟರೆ, ರಾತ್ರಿ ಬಂದು ಗುಡ್‌ನೈಟ್‌ ಇಷ್ಟೇ ಹೇಳುತ್ತಿದ್ದುದ್ದು.

‘ಈ ಅವಧಿಯಲ್ಲಿ ನಮ್ಮಿಬ್ಬರ ನಡುವೆ ಇಷ್ಟೇ ಮಾತುಕತೆ ನಡೆಯುತ್ತಿತ್ತು. ನಾನು ನಿರ್ದೇಶಕರ ನಟಿ. ನಾನು ನಿರ್ದೇಶಕ ರವಿ ಉದ್ಯಾವರ ಹೇಳಿದಂತೆ ಅಭಿನಯಿಸುತ್ತಿದ್ದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ’ ಎಂದು ತಮ್ಮ ಸಮರ್ಪಣಾ ಭಾವದ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾರೆ ಶ್ರೀದೇವಿ.

ಬೋನಿ ಕಪೂರ್‌ ಹಾಗೂ ಸುನಿಲ್‌ ಮಂಚಂಡ ನಿರ್ಮಾಣದ ‘ಮಾಮ್‌’ ಚಿತ್ರವನ್ನು ರವಿ ಉದ್ಯಾವರ ನಿರ್ದೇಶಿಸಿದ್ದಾರೆ.

ತಮ್ಮ ಪತ್ನಿಗೆ ಈ ಚಿತ್ರವನ್ನು ಉಡುಗೊರೆ ನೀಡಲು ಬೋನಿ ಕಪೂರ್‌ ನಿರ್ಧರಿಸಿದ್ದರು. ಇತ್ತೀಚೆಗೆ ತನ್ನ ಇಬ್ಬರು ಮಕ್ಕಳಾದ ಖುಷಿ ಹಾಗೂ ಜಾಹ್ನವಿ ಹಾಗೂ ಇಡೀ ಕುಟುಂಬದ ಜೊತೆಗೆ ಟ್ರೇಲರ್‌ ಅನ್ನು ಶ್ರೀದೇವಿ ಬಿಡುಗಡೆ ಮಾಡಿದರು.

ಹೊಸ ಚಿತ್ರಕ್ಕೆ ಸಹಿ ಹಾಕುವಾಗ ಶ್ರೀದೇವಿ ಕತೆಗೆ ಹೆಚ್ಚು ಒತ್ತು ನೀಡುತ್ತಾರಂತೆ. ‘ಮಾಮ್ ಚಿತ್ರಕತೆಯೇ ನಾನು ಈ ಸಿನಿಮಾಕ್ಕೆ ಸಹಿ ಹಾಕಲು ಕಾರಣ’ ಎಂದು ಅವರು ಹೇಳಿಕೊಂಡಿದ್ದಾರೆ.

ಅಮ್ಮ ದೇವಕಿ (ಶ್ರೀದೇವಿ) ಹಾಗೂ   ಮಗಳು ಆರ್ಯಾ ಕುರಿತಾದ ಕಥಾವಸ್ತುವನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ನವಾಜುದ್ದೀನ್‌ ಸಿದ್ಧಿಕಿ ಹಾಗೂ ಅಕ್ಷಯ ಖನ್ನಾ ನಟಿಸಿದ್ದಾರೆ. ಜುಲೈ 7ರಂದು ಬಿಡುಗಡೆಯಾಗಲಿದೆ.

ಈ ಚಿತ್ರದ ಟ್ರೇಲರ್‌ ವೈರಲ್‌ ಆಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ 30 ಲಕ್ಷ ಜನರು ವೀಕ್ಷಿಸಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry