ಎಫ್‌ಬಿಐ: ಕ್ರಿಸ್ಟೋಫರ್‌ ನಿರ್ದೇಶಕ

7

ಎಫ್‌ಬಿಐ: ಕ್ರಿಸ್ಟೋಫರ್‌ ನಿರ್ದೇಶಕ

Published:
Updated:
ಎಫ್‌ಬಿಐ: ಕ್ರಿಸ್ಟೋಫರ್‌ ನಿರ್ದೇಶಕ

ವಾಷಿಂಗ್ಟನ್‌: ನ್ಯಾಯಾಂಗ ಇಲಾಖೆಯ ಮಾಜಿ ಅಧಿಕಾರಿ ಕ್ರಿಸ್ಟೋಫರ್‌ ರೇ ಅವರನ್ನು ಪ್ರತಿಷ್ಠಿತ ತನಿಖಾ ಸಂಸ್ಥೆ ಫೆಡರಲ್‌ ಬ್ಯೂರೊ ಆಫ್‌ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ) ನಿರ್ದೇಶಕರನ್ನಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೇಮಕ ಮಾಡಿದ್ದಾರೆ.

ಹೊಸ ನಿರ್ದೇಶಕರ ಕುರಿತು ಟ್ವೀಟ್‌ ಮಾಡಿರುವ ಟ್ರಂಪ್‌, ‘ನಾನು ಅತ್ಯಂತ ನಿಷ್ಪಕ್ಷಪಾತಿಯಾಗಿರುವ ಕ್ರಿಸ್ಟೋಫರ್‌ ರೇ ಅವರನ್ನು ನೇಮಕ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯದ ಪಾತ್ರದ ಕುರಿತಂತೆ ಎಫ್‌ಬಿಐ ಮಾಜಿ ನಿರ್ದೇಶಕ ಜೇಮ್ಸ್‌ ಕೋಮಿ ಅವರು ಸೆನೆಟ್‌ ಆಯ್ಕೆ ಸಮಿತಿಯ ಮುಂದೆ  ಸಾಕ್ಷ್ಯ ನುಡಿಯುವ ಕೆಲವೇ ಗಂಟೆಗಳ ಮುಂಚೆ ಈ ನೇಮಕಾತಿ ನಡೆದಿದೆ. ಚುನಾವಣೆ ವಿವಾದಕ್ಕೆ ಸಂಬಂಧಿ

ಸಿದಂತೆ ಈ ಹಿಂದೆ ಟ್ರಂಪ್‌ ಹಾಗೂ ಕೋಮಿ ಅವರ ನಡುವೆ ವಾಗ್ವಾದ ನಡೆದಿತ್ತು. ಆ ಬಗ್ಗೆ ಹೇಳಿಕೆಗಳನ್ನು ಗುರುವಾರ ಕೋಮಿ ಅವರು ಸಮಿತಿಯ ಮುಂದೆ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry