ಮ್ಯಾನ್‌ಹೋಲ್‌ ಸ್ವಚ್ಛತೆಗೆ ಕಾರ್ಮಿಕರ ಬಳಕೆ

7

ಮ್ಯಾನ್‌ಹೋಲ್‌ ಸ್ವಚ್ಛತೆಗೆ ಕಾರ್ಮಿಕರ ಬಳಕೆ

Published:
Updated:
ಮ್ಯಾನ್‌ಹೋಲ್‌ ಸ್ವಚ್ಛತೆಗೆ ಕಾರ್ಮಿಕರ ಬಳಕೆ

ಮೈಸೂರು: ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಅವರ ಮನೆ ಮುಂಭಾಗ ಕಟ್ಟಿಕೊಂಡಿದ್ದ ಮ್ಯಾನ್‌ಹೋಲ್‌ಗೆ ಇಬ್ಬರು ಪೌರ ಕಾರ್ಮಿಕರು ಇಳಿದು ಶುಚಿಗೊಳಿಸಿದ್ದು ಬುಧವಾರ ಬೆಳಕಿಗೆ ಬಂದಿದೆ.

‘ನೂತನವಾಗಿ ನಿರ್ಮಿಸಿದ ಒಳಚರಂಡಿಯ ಚೇಂಬರ್‌ವೊಂದು ಕಟ್ಟಿಕೊಂಡಿದ್ದನ್ನು ಬೀದಿ ಶುಚಿಗೊಳಿಸಲು ಬಂದಿದ್ದ ಚೆಲುವರಾಜು ಅವರ ಗಮನಕ್ಕೆ ತಂದಿದ್ದೆ. ಗಣೇಶ್‌ ಎಂಬ ಮತ್ತೊಬ್ಬರೊಂದಿಗೆ ಅವರು ಮ್ಯಾನ್‌ಹೋಲ್‌ಗೆ ಇಳಿದು ಶುಚಿಗೊಳಿಸಿದ್ದಾರೆ. ಬಹುಹೊತ್ತಿನ ಬಳಿಕ ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಮೇಲೆ ಬರುವಂತೆ ಸೂಚಿಸಿದೆ. ಸ್ನಾನ ಮಾಡಲು ನೀರು ಹಾಗೂ ಸೋಪು ಕೂಡ ನೀಡಿದೆ. ಈ ದೃಶ್ಯವನ್ನು ಸೆರೆಹಿಡಿದ ಕೆಲವರು ಪಿತೂರಿ ನಡೆಸಿದ್ದಾರೆ’ ಎಂದು ಗೀತಾ ಹೇಳಿದ್ದಾರೆ.

‘ತಮ್ಮ ಮನೆ ಮುಂಭಾಗದ ಚೇಂಬರ್ ಶುಚಿಗೊಳಿಸುವಂತೆ ಅಧ್ಯಕ್ಷರು ತಾಕೀತು ಮಾಡಿದರು. ಮ್ಯಾನ್‌ಹೋಲ್‌ಗೆ ಇಳಿಯದೇ ಇದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎದುರು ಪೌರಕಾರ್ಮಿಕ ಗಣೇಶ್‌ ಹೇಳಿಕೆ ನೀಡಿದ್ದಾರೆ.

*

ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಮ್ಯಾನ್‌ಹೋಲ್‌ಗೆ ಇಳಿಸಿದ್ದಾಗಿ ಲಿಖಿತ ದೂರು ನೀಡಿದರೆ, ಅವರನ್ನು ಅನರ್ಹಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.

-ಪಿ.ಶಿವಶಂಕರ್‌, ಜಿ. ಪಂ.ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry