ಆಧಾರ್‌ ಸಲ್ಲಿಕೆ ಗಡುವು ವಿಸ್ತರಣೆ

7

ಆಧಾರ್‌ ಸಲ್ಲಿಕೆ ಗಡುವು ವಿಸ್ತರಣೆ

Published:
Updated:
ಆಧಾರ್‌ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ)  ತನ್ನ ಸದಸ್ಯರು ಆಧಾರ್‌   ಸಲ್ಲಿಸಲು  ನಿಗದಿ ಮಾಡಿದ್ದ ಕೊನೆಯ ದಿನವನ್ನು ಜೂನ್‌ 30ಕ್ಕೆ  ವಿಸ್ತರಿಸಿದೆ.

ಈಶಾನ್ಯ ರಾಜ್ಯಗಳಿಗೆ ಸೆ. 30ರವರೆಗೆ ಗಡುವು ನೀಡಲಾಗಿದೆ. ಸದಸ್ಯರು ಆಧಾರ್‌ ಸಂಖ್ಯೆ ಸಲ್ಲಿಸಲು ಈ ಮೊದಲು ಏ.30 ಕೊನೆ ದಿನವಾಗಿತ್ತು. ಭವಿಷ್ಯ ನಿಧಿ (ಪಿ.ಎಫ್‌) ಖಾತೆಗೆ ಆಧಾರ್‌ ಸಂಖ್ಯೆ ಸಂಪರ್ಕ ಕಲ್ಪಿಸಲು ಆಧಾರ್‌ ಸಂಖ್ಯೆ ಸಲ್ಲಿಸುವಂತೆ ಜನವರಿಯಲ್ಲಿಯೇ ಸದಸ್ಯರಿಗೆ  ಸೂಚಿಸಿತ್ತು.

ಗೃಹಸಾಲ

ಬೆಂಗಳೂರು:
 ಎಚ್‌ಡಿಎಫ್‌ಸಿ ರೆಡ್‌, ಗೃಹಸಾಲ ಪಡೆಯು ವರಿಗೆ ಕ್ರೆಡಿಟ್‌ ಆಧಾರಿತ ಸಬ್ಸಿಡಿ ಯೋಜನೆ ‘ ಕ್ಯಾಲ್ಕುಲೇಟರ್‌’ ಗೆ ಚಾಲನೆ ನೀಡಿದೆ.

ಈ ಯೋಜನೆ ಅಡಿ ಗ್ರಾಹಕರು ಶೇ 6.50 ವಾರ್ಷಿಕ ಬಡ್ಡಿದರದಲ್ಲಿ ಮೊದಲ ಗೃಹಸಾಲ ಪಡೆಯಬಹುದಾಗಿದೆ.

ರೆಡ್‌ಬಸ್‌ ರಿಯಾಯ್ತಿ

ಬೆಂಗಳೂರು:
ಆನ್‌ಲೈನ್‌ ಟ್ರಾವೆಲ್‌ ಬುಕ್ಕಿಂಗ್ ಸಂಸ್ಥೆ ರೆಡ್‌ಬಸ್‌,ಯಾತ್ರಾ ಸ್ಥಳಗಳಿಗೆ ಶೇ 25ರಷ್ಟು ರಿಯಾಯತಿ ದರದಲ್ಲಿ ಪ್ರವಾಸ ಆಯೋಜಿಸಿದ್ದು, ಉಚಿತ ವಸತಿ ಒದಗಿಸುವುದಾಗಿ ಹೇಳಿದೆ.

ಡಾಕ್ಸ್‌ ಆ್ಯಪ್‌ ಒಪ್ಪಂದ

ಬೆಂಗಳೂರು:
ಅಂತರ್ಜಾಲ ಆಧಾರಿತ ಆರೋಗ್ಯ ಸೇವೆ ಒದಗಿಸುತ್ತಿರುವ ಡಾಕ್ಸ್‌ ಆ್ಯಪ್‌, ದೇಶದ 100ಕ್ಕೂ ಹೆಚ್ಚು ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ.

ಆನ್‌ಲೈನ್‌ನಲ್ಲಿ ಪ್ರತಿದಿನ ಸುಮಾರು 120 ರೋಗಿಗಳಿಗೆ ಆರೋಗ್ಯ ಸಂಬಂಧಿ ಸೇವೆ ಒದಗಿಸುತ್ತಿದ್ದು, 2018ರೊಳಗೆ ಪ್ರತಿದಿನ 10 ಸಾವಿರ ರೋಗಿಗಳಿಗೆ ಸೇವೆ ಒದಗಿಸುವ ಗುರಿ ಹೊಂದಿರುವುದಾಗಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry