‘ಐ.ಟಿ: ಬಿ.ಟೆಕ್‌ ಸಾಲದು’

7

‘ಐ.ಟಿ: ಬಿ.ಟೆಕ್‌ ಸಾಲದು’

Published:
Updated:
‘ಐ.ಟಿ: ಬಿ.ಟೆಕ್‌ ಸಾಲದು’

ಹೈದರಾಬಾದ್‌: ‘ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಬರುವ ದಿನಗಳಲ್ಲಿ ಬಿ.ಟೆಕ್‌ ಪದವೀಧರರಿಗೆ ಉದ್ಯೋಗ ಅವಕಾಶ ಕಡಿಮೆಯಾಗಲಿವೆ’ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವಿಸಸ್‌ನ ಅಧ್ಯಕ್ಷ ಟಿ. ವಿ. ಮೋಹನ್‌ದಾಸ್ ಪೈ ಅಂದಾಜಿಸಿದ್ದಾರೆ.

‘ಐ.ಟಿ ವಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಿ.ಟೆಕ್ ಪದವಿ ಸಾಕಾಗುವುದಿಲ್ಲ. ನಿರ್ದಿಷ್ಟ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಸಾಧಿಸಿದವರಿಗೆ, ಸ್ನಾತಕೋತ್ತರ ಪದವಿ (ಎಂ.ಟೆಕ್‌) ಪಡೆದವರಿಗೆ ಮಾತ್ರ ಐ.ಟಿ ಸಂಸ್ಥೆಗಳು ಮಣೆ ಹಾಕಲಿವೆ.

‘ಎಂಜಿನಿಯರಿಂಗ್‌ ಕಾಲೇಜ್‌ಗಳಲ್ಲಿ ಓದುವವರೆಲ್ಲ ದಯವಿಟ್ಟು ಎಂ.ಟೆಕ್‌ ಮಾಡಿ, ನಿರ್ದಿಷ್ಟ ವಿಷಯದಲ್ಲಿ ವಿಶೇಷ ಪರಿಣತಿ ಸಾಧಿಸಿ. ನಿಮ್ಮಷ್ಟಕ್ಕೆ ನೀವೇ ಕೋಡಿಂಗ್ ಕಲಿಯಿರಿ. ಭವಿಷ್ಯದಲ್ಲಿ ಐ.ಟಿ ಸಂಸ್ಥೆಗಳು ಅಭ್ಯರ್ಥಿಯ ಕೋಡಿಂಗ್‌ ತಿಳಿವಳಿಕೆ ಆಧರಿಸಿ ನೇಮಕ ಮಾಡಿಕೊಳ್ಳಲಿವೆ.

‘ಐ.ಟಿ ಕ್ಷೇತ್ರದಲ್ಲಿನ ಜಾಗತಿಕ ವೆಚ್ಚವು  ಪ್ರಸಕ್ತ ಸಾಲಿನಲ್ಲಿ ಕೇವಲ ಶೇ 2ರಷ್ಟು ಇರಲಿದೆ. ಈ ಹಿಂದೆ ಇದು ಶೇ 3 ರಿಂದ 4 ರಷ್ಟಿತ್ತು. ಇದು ಕೂಡ ಉದ್ಯೋಗ ಅವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ವರ್ಷ ಐ.ಟಿ ಉದ್ದಿಮೆಯಲ್ಲಿ 1.5 ಲಕ್ಷದಿಂದ 1.6 ಲಕ್ಷದವರೆಗೆ ಹೊಸ ನೇಮಕಾತಿಗಳು ನಡೆಯಲಿವೆ’ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.

‘ಐ.ಟಿ ವಲಯದಲ್ಲಿ ಉದ್ಯೋಗ ಅವಕಾಶ ಕಡಿಮೆಯಾಗುತ್ತಿವೆ. ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತಿದೆ ಎನ್ನುವ ವರದಿ ಉತ್ಪ್ರೇಕ್ಷೆಯಿಂದ ಕೂಡಿವೆ. ಕೆಲಸದಲ್ಲಿ ದಕ್ಷತೆ ತೋರಿಸದವರನ್ನು ಪ್ರತಿ ವರ್ಷ ಮನೆಗೆ ಕಳಿಸಲಾಗುತ್ತಿದೆ. ಅಂಥವರ ಸಂಖ್ಯೆ ಶೇ 1ರಿಂದ 2ರಷ್ಟು ಮಾತ್ರ .

‘ಐ.ಟಿ ಉದ್ದಿಮೆಯಲ್ಲಿ ಕಾರ್ಮಿಕ ಸಂಘಟನೆ ಸ್ಥಾಪಿಸಲು ಕೆಲವರು ಹವಣಿಸುತ್ತಿದ್ದಾರೆ. ಅವರಿಗೆ ಯಾರೊಬ್ಬರ ಬೆಂಬಲ ದೊರೆಯುವುದಿಲ್ಲ. ಇಂಥವರ ಹಿಂದೆ ಹೋಗುವವರು ಯಾವತ್ತೂ  ಉದ್ಯೋಗ ಗಿಟ್ಟಿಸಿಕೊಳ್ಳುವುದಿಲ್ಲ’ ಎಂದೂ ಪೈ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry