ಜಿಎಸ್‌ಟಿ ಜಾರಿಗೆ 3 ವರ್ಷದಿಂದ ಸಿದ್ಧತೆ

7
ಬಜೆಟ್‌ನಲ್ಲಿ ಉಪಕರ ರದ್ದು: ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆ

ಜಿಎಸ್‌ಟಿ ಜಾರಿಗೆ 3 ವರ್ಷದಿಂದ ಸಿದ್ಧತೆ

Published:
Updated:
ಜಿಎಸ್‌ಟಿ ಜಾರಿಗೆ 3 ವರ್ಷದಿಂದ ಸಿದ್ಧತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿರುವುದನ್ನು ಹಣಕಾಸು ಸಚಿವಾಲಯ  ಬಹಿರಂಗಪಡಿಸಿದೆ.

ಜಿಎಸ್‌ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಮೂರು ಬಜೆಟ್‌ಗಳಲ್ಲಿ ಸರಕು ಮತ್ತು ಸೇವೆಗಳ ಮೇಲಿನ ಅನೇಕ ಉಪಕರಗಳನ್ನು (ಸೆಸ್‌) ರದ್ದು ಮಾಡಿದೆ.

ತೆರಿಗೆ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಇತರ 13 ಉಪಕರಗಳನ್ನು ಕೈಬಿಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೊಂಡಿದೆ. ಆದರೆ, ಈ ಹಿಂದೆ ಇದ್ದ 7ಉಪಕರಗಳು ಜಿಎಸ್‌ಟಿಯಲ್ಲಿಯೂ ಮುಂದುವರೆಯಲಿವೆ.

ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿತ ಆಮದು ಸರಕು, ಮೋಟಾರ್‌ ಸ್ಪಿರಿಟ್‌,ಡೀಸೆಲ್‌, ಕಚ್ಚಾ ಪೆಟ್ರೋಲಿಯಂ, ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಸೆಸ್‌ ಜಿಎಸ್‌ಟಿಯಲ್ಲಿ ಮುಂದುವರೆಯಲಿವೆ.

ಯಾವ ಬಜೆಟ್‌ನಲ್ಲಿ ಎಷ್ಟು ಸೆಸ್‌ ರದ್ದು?

* 2015–16: ಶಿಕ್ಷಣ ಕ್ಷೇತ್ರದಲ್ಲಿನ ಆಮದು ಮೇಲಿನ ಸೆಸ್‌ ರದ್ದು.* 2016–17: ಸಿಮೆಂಟ್‌, ಮೇವು ಮಂಡಳಿ, ಬಣ್ಣದ ಪುಡಿ, ಕಬ್ಬಿಣ ಮತ್ತು  ಮ್ಯಾಂಗನೀಸ್‌ ಅದಿರು ಗಣಿಗಳ ಮೇಲಿನ ಉಪಕರ, ತಂಬಾಕು, ಸಿನಿಮಾ ಕಾರ್ಮಿಕರ ಕಲ್ಯಾಣ ಸೆಸ್‌ ರದ್ದು.* 2017–18: ಸಂಶೋಧನಾ ಮತ್ತು ಅಭಿವೃದ್ಧಿ ಸೆಸ್‌, ಶುದ್ಧ ಇಂಧನ, ಸ್ವಚ್ಛಭಾರತ, ಮೂಲಸೌಕರ್ಯ, ರಬ್ಬರ್‌,ಬೀಡಿ, ಚಹ, ಸಕ್ಕರೆ, ಸೆಣಬು ಕೈಗಾರಿಕೆಗೆ ಬಳಸುವ ನೀರಿನ ಮೇಲಿನ ಕೃಷಿ ಕಲ್ಯಾಣ ಸೆಸ್‌ ಸೇರಿ ಒಟ್ಟು 13 ಉಪಕರಗಳ ರದ್ದು.

ಜಿಎಸ್‌ಟಿ ದಾರಿ ಸುಗಮ

* ಬಜೆಟ್‌ನಲ್ಲಿ ಹಂತ, ಹಂತವಾಗಿ ಹೆಚ್ಚುವರಿ ತೆರಿಗೆ, ಉಪಕರ ರದ್ದುಗೊಳಿಸುವ ಮೂಲಕ ಜಿಎಸ್‌ಟಿಯ ಸುಗಮ ಜಾರಿಗೆ  ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಪೂರ್ವ ಸಿದ್ಧತೆ ಮಾಡಿಕೊಂಡಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry