ಆರ್ಚರಿ: ಅರ್ಹತಾ ದೀಪಿಕಾಗೆ ಅಗ್ರಸ್ಥಾನ

7

ಆರ್ಚರಿ: ಅರ್ಹತಾ ದೀಪಿಕಾಗೆ ಅಗ್ರಸ್ಥಾನ

Published:
Updated:
ಆರ್ಚರಿ: ಅರ್ಹತಾ ದೀಪಿಕಾಗೆ ಅಗ್ರಸ್ಥಾನ

ಅಂತಾಲ್ಯ: ಭಾರತದ ದೀಪಿಕಾ ಕುಮಾರಿ ಬುಧವಾರ ಇಲ್ಲಿ ಆರಂಭವಾದ ಆರ್ಚರಿ ವಿಶ್ವಕಪ್‌ನ ಎರಡನೇ ಹಂತದ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಶಾಂಘೈನಲ್ಲಿ ನಡೆದ ಮೊದಲ ಹಂತದ ಟೂರ್ನಿಯಲ್ಲಿ ದೀಪಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದರು. ಆದರೆ ಇಲ್ಲಿ ನಡೆದ ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಅವರು ಉತ್ತಮ ಸಾಮರ್ಥ್ಯ ತೋರುವ ಮೂಲಕ ವಿಶ್ವಕಪ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.

ರ್ಹತಾ ಸುತ್ತಿನಲ್ಲಿ ಅವರು ಚೀನಾ ತೈಪೆಯ ಆಟಗಾರ್ತಿ ಪೆಂಗ್‌ ಚಿಯಾ ಮಾವೊ ಅವರನ್ನು ಹಿಂದಿಕ್ಕಿ ಮೊದಲಿಗರಾದರು. ಒಟ್ಟು 672 ಪಾಯಿಂಟ್ಸ್‌ಗಳಿಂದ ಗಮನಸೆಳೆದರು. ಐದು ಪಾಯಿಂಟ್ಸ್‌ಗಳಲ್ಲಿ ಪೆಂಗ್ ಎರಡನೇ ಸ್ಥಾನ ಪಡೆದರು.

ಗುರುವಾರ ಇಲ್ಲಿ ದೀಪಿಕಾ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಭಾರತದ ಇತರ ಸ್ಪರ್ಧಿಗಳಾದ ಮೋನಿಕಾ ಸರೆನ್ ಮತ್ತು ಪ್ರೀತಿ ಕ್ರಮವಾಗಿ 31 ಹಾಗೂ 45ನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಪುರುಷರ ರಿಕರ್ವ್ ವಿಭಾಗದಲ್ಲಿ ಭಾರತದ ಧಣಿ ರಾಮ್‌ ಬಾಸುಮತ್ರಿ 667 ಪಾಯಿಂಟ್ಸ್‌ಗಳಿಂದ ಏಳನೇ ಸ್ಥಾನ ಪಡೆದರು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅನಂತ ದಾಸ್ ಎರಡು ಪಾಯಿಂಟ್ಸ್‌ ಹಿಂದೆ ಉಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry