ಎರಾ ಸೆಜಿಯನ್‌ ನಿಧನ

7

ಎರಾ ಸೆಜಿಯನ್‌ ನಿಧನ

Published:
Updated:
ಎರಾ ಸೆಜಿಯನ್‌ ನಿಧನ

ಚೆನ್ನೈ: ಹಿರಿಯ ರಾಜಕಾರಣಿ ಎರಾ ಸೆಜಿಯನ್‌ (95) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಮದ್ರಾಸ್‌ ಪ್ರಾಂತ್ಯದ (ಪ್ರಸ್ತುತ ತಮಿಳುನಾಡು)  ತಂಜಾವೂರು ಜಿಲ್ಲೆಯಲ್ಲಿ 1923ರ ಏಪ್ರಿಲ್‌ 28ರಂದು ಅವರು ಜನಿಸಿದ್ದರು.

ಪದವಿ ಅಧ್ಯಯನದ ಬಳಿಕ ಅಣ್ಣಾದೊರೈ ಅವರ ನಾಯಕತ್ವದ ಕಡೆಗೆ ಆಕರ್ಷಿತರಾಗಿ ಡಿಎಂಕೆ ಸೇರಿದ್ದರು.

ಸೆಜಿಯನ್‌ 1962ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ನಾಲ್ಕು ಮತ್ತು ಐದನೇ ಲೋಕಸಭಾ ಚುನಾವಣೆಯಲ್ಲೂ ಜಯಗಳಿಸಿದ್ದರು. 1978ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2001ರಲ್ಲಿ ರಾಜಕಾರಣದಿಂದ ನಿವೃತ್ತರಾದರು.

ಡಾ. ಸರೋಜಿನಿ ಶಿಂತ್ರಿ

ಧಾರವಾಡ: ಇಂಗ್ಲಿಷ್‌ ಪ್ರಾಧ್ಯಾಪಕಿ, ಲೇಖಕಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಗೌರವಾಧ್ಯಕ್ಷೆ ಡಾ. ಸರೋಜಿನಿ ಶಿಂತ್ರಿ (87) ಬುಧವಾರ ನಿಧನರಾದರು.

ಕರ್ನಾಟಕ ವಿ.ವಿಯಿಂದ ಪಿಎಚ್.ಡಿ. ಪದವಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದ ಅವರು ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿ.ವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರ ಅಪೇಕ್ಷೆಯಂತೆ ದೇಹವನ್ನು ಎಸ್‌.ಡಿ.ಎಂ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ರಾಮನಗರದಲ್ಲಿರುವ ಮನೆಯಲ್ಲಿ ಗುರುವಾರ ಬೆಳಿಗ್ಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. (ಮೊ: 8073971701).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry