ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ

7

ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ

Published:
Updated:
ಶಿಕ್ಷೆಗೆ ತಡೆ: ಕರ್ಣನ್‌ ಅರ್ಜಿ ಮತ್ತೆ ತಿರಸ್ಕೃತ

ನವದೆಹಲಿ: ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಧಿಸಲಾಗಿರುವ ಆರು ತಿಂಗಳು ಜೈಲು ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಮೇ 9ರಂದು ಶಿಕ್ಷೆ ವಿಧಿಸಲಾಗಿದ್ದು ಬಳಿಕ ಕರ್ಣನ್‌ ಅವರು ತಲೆಮರೆಸಿಕೊಂಡಿದ್ದಾರೆ.

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ದೀಪಕ್‌ ಗುಪ್ತಾ ಅವರ ರಜಾಕಾಲದ ಪೀಠಕ್ಕೆ ಕರ್ಣನ್‌ ಅವರ ವಕೀಲ ಮ್ಯಾಥ್ಯೂ ಜೆ. ನೆಡುಂಪಾರ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಪೀಠ ನಿರಾಕರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry