ಗ್ರಾಹಕರ ವೈಯಕ್ತಿಕ ಮಾಹಿತಿ ಮಾರಾಟ ಮಾಡುತ್ತಿದ್ದ ಆ್ಯಪಲ್‌ ಕಂಪೆನಿ ಉದ್ಯೋಗಿಗಳ ಬಂಧನ: ಚೀನಾ

7

ಗ್ರಾಹಕರ ವೈಯಕ್ತಿಕ ಮಾಹಿತಿ ಮಾರಾಟ ಮಾಡುತ್ತಿದ್ದ ಆ್ಯಪಲ್‌ ಕಂಪೆನಿ ಉದ್ಯೋಗಿಗಳ ಬಂಧನ: ಚೀನಾ

Published:
Updated:
ಗ್ರಾಹಕರ ವೈಯಕ್ತಿಕ ಮಾಹಿತಿ ಮಾರಾಟ ಮಾಡುತ್ತಿದ್ದ ಆ್ಯಪಲ್‌ ಕಂಪೆನಿ ಉದ್ಯೋಗಿಗಳ ಬಂಧನ: ಚೀನಾ

ಬೀಜಿಂಗ್‌: ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಮಾರಾಟ ಮಾಡುತ್ತಿದ್ದ ಆ್ಯಪಲ್‌ ಕಂಪೆನಿ ಉದ್ಯೋಗಿಗಳನ್ನು ಒಳಗೊಂಡ ಜಾಲವೊಂದನ್ನು ಬಂಧಿಸಿರುವುದಾಗಿ ಜೀನಾದ ಅಧಿಕಾರಿಗಳು ಹೇಳಿದ್ದಾರೆ.

22 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ 20 ಮಂದಿ ಆ್ಯಪಲ್‌ ಕಂಪೆನಿಯ ಉದ್ಯೋಗಿಗಳಾಗಿದ್ದಾರೆ. ಇವರು ಕಂಪೆನಿಯ ಆಂತರಿಕ ಗಣಕೀಕೃತ ವ್ಯವಸ್ಥೆಯನ್ನು ಅಕ್ರಮವಾಗಿ ಬಳಸಿ ಗ್ರಾಹಕರ ಮೊಬೈಲ್‌ ಸಂಖ್ಯೆ ಸೇರಿದಂತೆ, ಆ್ಯಪಲ್‌ ಐಡಿ ಹಾಗೂ ಮತ್ತಿತರೆ ದತ್ತಾಂಶಗಳನ್ನು ಸುಮಾರು ₹47 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಇಲ್ಲಿನ ದಕ್ಷಿಣ ಝೇಜಾಂಗ್‌ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕಾಳಸಂತೆಯ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ದಿನ ಪತ್ರಿಕೆಯೊಂದು ವರದಿ ಪ್ರಕಟಿಸಿತ್ತು. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದರು.

ಗೌಂಗ್‌ಡಾಂಗ್‌, ಝೇಜಾಂಗ್‌, ಜಿಯಾಂಗ್ಸು, ಫುಜಿಯಾನ್‌ ಪ್ರಾಂತ್ಯಗಳಲ್ಲಿ ಹಲವು ದಿನಗಳಿಂದ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಅವರು ಕಾರ್ಯ ಪ್ರವೃತ್ತರಾಗಿದ್ದ ಸ್ಥಳಕ್ಕೆ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿತ್ತು. ಬಂಧಿತರಿಂದ ಅವರು ಬಳಸುತ್ತಿದ್ದ ‘ಕ್ರಿಮಿನಲ್‌ ಸಲಕರಣೆ’ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಗ್ರಾಹಕರ ಮಾಹಿತಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸುಮಾರು ₹100ರಿಂದ ₹1700ರ ವರೆಗೆ ಹಣ ಪಡೆಯುತ್ತಿದ್ದರು. ಆದರೆ ಮಾರಾಟವಾಗಿರುವ ಮಾಹಿತಿ ಚೀನಾದ ಗ್ರಾಹಕರದ್ದೇ ಅಥವಾ ಬೇರೆ ದೇಶದವರದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ.

ಚೀನಾದಲ್ಲಿ ದೇಶದ ಆಂತರಿಕ ರಕ್ಷಣೆ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದಾದ ವಿವಾದಾದ್ಮಕ ಅಂತರ್ಜಾಲ ಸುರಕ್ಷತಾ ಕಾನೂನನ್ನು ಕಳೆದ ಜೂನ್‌ 01ರಂದು ಜಾರಿಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry