ಕೇವಲ ಬಿ ಟೆಕ್ ಕಲಿತರೆ ಭವಿಷ್ಯದಲ್ಲಿ ಕೆಲಸ ಸಿಗುವುದು ಕಷ್ಟ: ಮೋಹನ್‌ದಾಸ್ ಪೈ

7

ಕೇವಲ ಬಿ ಟೆಕ್ ಕಲಿತರೆ ಭವಿಷ್ಯದಲ್ಲಿ ಕೆಲಸ ಸಿಗುವುದು ಕಷ್ಟ: ಮೋಹನ್‌ದಾಸ್ ಪೈ

Published:
Updated:
ಕೇವಲ ಬಿ ಟೆಕ್ ಕಲಿತರೆ ಭವಿಷ್ಯದಲ್ಲಿ ಕೆಲಸ ಸಿಗುವುದು ಕಷ್ಟ: ಮೋಹನ್‌ದಾಸ್ ಪೈ

ಹೈದರಾಬಾದ್: ಕೇವಲ ಬಿ ಟೆಕ್ ಪದವಿ ಹೊಂದಿದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯುವುದು ಕಷ್ಟಸಾಧ್ಯವಾಗಬಹುದು ಎಂದು ಇನ್ಫೊಸಿಸ್‌ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮಾಜಿ ಮುಖ್ಯಸ್ಥ, ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಅವರು ‘ಎಂ ಟೆಕ್ ಅಧ್ಯಯನ ಮಾಡಿ ಪರಿಣಿತರಾಗಿ ಎಂಬುದು ವಿದ್ಯಾರ್ಥಿಗಳಿಗೆ ನನ್ನ ಸಲಹೆ. ಹೆಚ್ಚುವರಿ ತರಗತಿಗಳ ಮೂಲಕ ಕೋಡಿಂಗ್ ಕಲಿಯಿರಿ. ಯಾಕೆಂದರೆ ಮುಂದಿನ ದಿನಗಳಲ್ಲಿ ನಿಮ್ಮ ಕೋಡಿಂಗ್ ಜ್ಞಾನವನ್ನು ಆಧಾರವಾಗಿಟ್ಟುಕೊಂಡು ಕಂಪೆನಿಗಳು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಬಹುದು’ ಎಂದು ಹೇಳಿದ್ದಾರೆ.

‌‘ನಿಮ್ಮನ್ನು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಂಡು 6 ತಿಂಗಳು ತರಬೇತಿ ನೀಡುವುದು ಅವರಿಗೆ (ಕಂಪೆನಿಗಳಿಗೆ) ಬೇಕಿಲ್ಲ. ಅವರು ಯಾಕೆ ಸಮಯ ಹಾಳು ಮಾಡುತ್ತಾರೆ? ಅವರು ನಿಮ್ಮ ಕೋಡಿಂಗ್ ಕೌಶಲವನ್ನು ಗಮನಿಸುತ್ತಾರೆ. ಅದರ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಾರೆ’ ಎಂದು ಪೈ ಹೇಳಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಬೇಕೆಂದರೆ ಎಂ ಟೆಕ್‌ ಆಗಿರಲೇಬೇಕು, ಕೋಡಿಂಗ್ ಕೌಶಲ ತಿಳಿದಿರಬೇಕು ಮತ್ತು ತಜ್ಞರಾಗಿರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಜಾಗತಿಕವಾಗಿ ವರ್ಷಕ್ಕೆ ಶೇಕಡ 3ರಿಂದ 4ರಷ್ಟು ಬೆಳವಣಿಗೆ ಹೊಂದುತ್ತಿದ್ದ ಐಟಿ ಉದ್ಯಮ ಈ ವರ್ಷ ಕೇವಲ ಶೇಕಡ 2ರಷ್ಟು ಬೆಳವಣಿಗೆ ಸಾಧಿಸಿದೆ. ಈ ವರ್ಷ ಐಟಿ ಕಂಪೆನಿಗಳು ಕೇವಲ 1.5ರಿಂದ 1.6 ಲಕ್ಷ ಮಂದಿಯನ್ನಷ್ಟೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಐಟಿ ಉದ್ಯೋಗಿಗಳಿಗೆ ಬೇಸರ: ಪೈ ಅವರ ಹೇಳಿಕೆಯಿಂದ ಬೇಸರವಾಗಿದೆ ಎಂದು ಅಖಿಲ ಭಾರತ ಐಟಿ ಉದ್ಯೋಗಿಗಳ ಸಂಘಟನೆ ಹೇಳಿದೆ. ಅಲ್ಲದೆ, ಈ ಹೇಳಿಕೆ ಉದ್ಯೋಗಿಗಳ ಸಾಂವಿಧಾನಿಕ ಹಕ್ಕುಗಳಿಗೆ ಒಡ್ಡಲಾದ ಬಹಿರಂಗ ಬೆದರಿಕೆ ಎಂದು ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry