ರಕ್ಷಿತ್‌ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ಅಂತರದ ಟ್ರೋಲ್‌ಗಳು

7

ರಕ್ಷಿತ್‌ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ಅಂತರದ ಟ್ರೋಲ್‌ಗಳು

Published:
Updated:
ರಕ್ಷಿತ್‌ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ಅಂತರದ ಟ್ರೋಲ್‌ಗಳು

ಬೆಂಗಳೂರು: ಚಂದನವನದ ನಟ  ರಕ್ಷಿತ್‌ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುಂದಿನ ತಿಂಗಳು ನಡೆಯಲಿದೆ ಎಂಬ ಗಾಳಿ ಸುದ್ದಿಯ  ನಡುವೆ  ರಕ್ಷಿತ್‌ ಮತ್ತು ರಶ್ಮಿಕಾ ಅವರ ವಯಸ್ಸಿನ ಅಂತರದ  ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ತೆರೆಕಂಡ ಕಿರಿಕ್‌ ಪಾರ್ಟಿ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಚಿತ್ರದಲ್ಲಿ ಕರ್ಣ ಮತ್ತು ಸಾನ್ವಿ ಪಾತ್ರದಲ್ಲಿ ಮಿಂಚಿದ್ದ ಈ ಜೋಡಿ ಸಿನಿ ಪ್ರಿಯರ ಮನ ಗೆದಿತ್ತು.

ನಂತರದ ದಿನಗಳಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.  ಇದೀಗ ಇವರು ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹಾಕಲು ಇಷ್ಟು ಸಾಕು ತಾನೇ?  34 ವರ್ಷದ ರಕ್ಷಿತ್‌ ಮತ್ತು 21ರ ಹರೆಯದ ರಶ್ಮಿಕಾ ನಡುವೆ 13 ವರ್ಷಗಳ ಅಂತರವಿದೆ.  ಇದನ್ನು ಗುರಿಯಾಗಿಸಿಕೊಂಡು ಹಲವರು ಟ್ರೋಲ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.

ಟ್ರೋಲ್‌ 1

ವಯಸ್ಸು ಯಾವತ್ತು ಲೆಕಕ್ಕೆ ಬರುವುದಿಲ್ಲ, ಸೌಂದರ್ಯವೇ ಎಲ್ಲಾ

ಟ್ರೋಲ್‌ 2

ರಕ್ಷಿತ್‌ ಮತ್ತು ರಶ್ಮಿಕಾ ಜೋಡಿಗೆ ಮದುವೆಯಾದ ಮೇಲೆ ಮಕ್ಕಳಿಗೆ ಏನು ಹೇಳಬಹುದು ಎಂಬ ಟ್ರೋಲ್ ಇಲ್ಲಿದೆ.- ‘‘ಲೇ ಮಕ್ಳ ನಾನು ಹೈಸ್ಕೂಲ್‌ ಓದುವಾಗ ನಿಮ್ಮ ಅಮ್ಮ ಇನ್ನು ಹುಟ್ಟೆ ಇರಲಿಲ್ಲ’’

ಟ್ರೋಲ್‌ 3

ರೀಲ್‌ನಲ್ಲಿ ಸೀನಿಯರ್‌ನ ಪಟಾಯಿಸೋದು ಹಾಗೂ ರಿಯಲ್‌ ಲೈಫ್‌ನಲ್ಲಿ ಜೂನಿಯರ್‌ನ ಪಟಾಯಿಸೋದು  ಸಾಮಾನ್ಯವಂತೆ!

 

ಟ್ರೊಲ್‌ 4

ಪಿಯುಸಿ, ಪದವಿ ಓದುತ್ತಿದ್ದರೂ ಪರವಾಗಿಲ್ಲ ಎಲ್‌ಕೆಜಿ, ಯುಕೆಜಿ ಓದುತ್ತಿರುವ ಹೆಣ್ಣು  ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು ಎಂಬ ಟ್ರೋಲ್‌ ಗಳು ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry