ಹಿರಿಯ ನಾಗರಿಕರ ಮನೆಗೆ ಹೆಚ್ಚಿದ ಬೇಡಿಕೆ

7

ಹಿರಿಯ ನಾಗರಿಕರ ಮನೆಗೆ ಹೆಚ್ಚಿದ ಬೇಡಿಕೆ

Published:
Updated:
ಹಿರಿಯ ನಾಗರಿಕರ ಮನೆಗೆ ಹೆಚ್ಚಿದ ಬೇಡಿಕೆ

ಹಿರಿಯ ನಾಗರಿಕರು ನೆಲೆಸಲು ಅನುಕೂಲವಾಗುವಂತಹ ಮನೆಗಳಿಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದು ಯುನೈಟೆಡ್‌ ನೇಷನ್ಸ್‌ ಪಾಪ್ಯುಲೇಶನ್‌ ಫಂಡ್‌ (ಯುಎನ್‌ಎಫ್‌ಪಿಎ) ಹಾಗೂ ಹೆಲ್ಪ್‌ ಏಜ್‌ ಇಂಟರ್‌ನ್ಯಾಷನಲ್‌ ಇತ್ತೀಚೆಗೆ  ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.

ಬೇರೆ ಬೇರೆ ಪ್ರದೇಶಗಳಿಗೆ ಸುಲಭವಾಗಿ ಓಡಾಡಲು ಅನುಕೂಲಕರ ಜಾಗ ಬೆಂಗಳೂರು ಎನ್ನುವುದು ಈ ಬೆಳವಣಿಗೆಗೆ ಮುಖ್ಯ ಕಾರಣ. ಸಮೀಕ್ಷೆ ಪ್ರಕಾರ 2050ರ ಸುಮಾರಿಗೆ 60 ವರ್ಷಕ್ಕೆ ಮೇಲ್ಪಟ್ಟವರೇ ಹೆಚ್ಚು ಜನ ಇರಲಿದ್ದಾರೆ. ಹೀಗಾಗಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳೂ ಅಭಿವೃದ್ಧಿ ಕಾಣಲಿವೆ. ಅದರಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತವೂ ಒಂದು.

‘ಒಟ್ಟುಕುಟುಂಬದ ಪರಿಕಲ್ಪನೆ ಕಡಿಮೆಯಾಗುತ್ತಿದೆ. ಇನ್ನುಮುಂದೆ ಹಿರಿಯ ನಾಗರಿಕರು ಮಾತ್ರ ಒಂದೆಡೆ ಇರಬೇಕಾದ ಪರಿಸ್ಥಿತಿ ಹೆಚ್ಚಲಿದೆ. ಹೀಗಾಗಿ ಅವರಿಗೆ ಅನುಕೂಲವಾಗುವಂಥ ಮನೆಗಳ ನಿರ್ಮಾಣ ಕಾರ್ಯ ಹೆಚ್ಚಲಿದೆ’ ಎನ್ನುತ್ತಾರೆ ಕ್ರೆಡಾಯ್‌ ಕಾರ್ಯದರ್ಶಿ ಸುರೇಶ್‌ ಹರಿ.

ಹಿರಿಯ ನಾಗರಿಕರ ಅನುಕೂಲತೆ ಮನಗಂಡು ಇನ್ನುಮುಂದೆ ಬಿಲ್ಡರ್‌ಗಳು ಇಂಥ ಯೋಜನೆಯನ್ನು ಹೆಚ್ಚು ಕೈಗೊಳ್ಳಲಿದ್ದಾರೆ. ಇದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿದೆ.

ಹಿರಿಯ ನಾಗರಿಕರೂ ತಮ್ಮ ಅನುಕೂಲಕ್ಕೆ ತಕ್ಕಂತಿರುವ ಮನೆಯಲ್ಲಿ ವಾಸಿಸುವ ಮನಸ್ಸು ಮಾಡುತ್ತಿದ್ದಾರೆ. ಆರೋಗ್ಯ ಸಂಬಂಧಿ ಸೌಲಭ್ಯ, ಮನರಂಜನಾ ತಾಣ,  ಹಸಿರು ತುಂಬಿದ ಜಾಗ, ಅಗತ್ಯ ರಕ್ಷಣಾ ಸಿಬ್ಬಂದಿ, ಓಡಾಡಲು ಸಮರ್ಪಕ ಜಾಗ,  ಅಗತ್ಯ ಸಾಮಾನುಗಳನ್ನು ಮನೆಗೇ ತರಿಸಿಕೊಳ್ಳುವ ಸೌಲಭ್ಯ, ಹತ್ತಿರದಲ್ಲಿ ಪಾರ್ಕ್‌, ಮನೆಯಲ್ಲಿ ಅನುಕೂಲಕರ ಸ್ಥಳಾವಕಾಶ ಇರಬೇಕೆಂದು ಹಿರಿಯರು ಅಪೇಕ್ಷಿಸುತ್ತಿದ್ದಾರೆ. ಅನುಕೂಲದ ಜೊತೆಗೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಅಂದಹಾಗೆ ಹಿರಿಯ ನಾಗರಿಕರಿಗಾಗಿ ಸರಳ ಹಾಗೂ ವೈಭವೋಪೇತ ಮನೆ ಆಯ್ಕೆಗಳಿವೆ. ಬ್ರಿಗೇಡ್‌ ಡೆವಲಪರ್ಸ್‌, ಮಂತ್ರಿ, ಓಜೋನ್‌ ಗ್ರೂಪ್‌   ಸೇರಿದಂತೆ ಅನೇಕ ಬಿಲ್ಡರ್‌ಗಳು ಹಿರಿಯ ನಾಗರಿಕರ ಮನೆ ನಿರ್ಮಾಣ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಕನಕಪುರ, ಹಳೆ ವಿಮಾನ ನಿಲ್ದಾಣ ರಸ್ತೆ, ದೇವನಹಳ್ಳಿ ಪ್ರದೇಶಗಳಲ್ಲಿ ಇಂಥ ಮನೆಗಳು ಹೆಚ್ಚು ನಿರ್ಮಾಣವಾಗುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry