ದೇಸಿ ಉಡುಗೆ ತೊಡುಗೆ ಪ್ರದರ್ಶನ

7

ದೇಸಿ ಉಡುಗೆ ತೊಡುಗೆ ಪ್ರದರ್ಶನ

Published:
Updated:
ದೇಸಿ ಉಡುಗೆ ತೊಡುಗೆ ಪ್ರದರ್ಶನ

ಕಾಟನ್ ಮತ್ತು ರೇಷ್ಮೆ ಕೈಮಗ್ಗ ಸೇರಿದಂತೆ ದೇಶದ ವಿವಿಧ ರಾಜ್ಯದ ನೇಕಾರರು ತಯಾರಿಸಿದ ಬಟ್ಟೆಗಳು, ಆಭರಣಗಳ ಪ್ರದರ್ಶನ ಜೆ.ಪಿ ನಗರದ ಸಿಂಧೂರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜನೆಗೊಂಡಿದೆ.

‘ಸಿಲ್ಕ್‌ ಇಂಡಿಯಾ’ ಪ್ರದರ್ಶನವನ್ನು ನಟಿ ಮಿಲನಾ ನಾಗರಾಜ್ ಉದ್ಘಾಟಿಸಿದರು. ಈ ಪ್ರದರ್ಶನದಲ್ಲಿ ರಾಜ್ಯದ ಕಾಟನ್ ಮತ್ತು ರೇಷ್ಮೆ ಕರಕುಶಲ ಬಟ್ಟೆಗಳು, ಒಡಿಶಾದ ಸೀರೆಗಳು, ಪಶ್ಚಿಮ ಬಂಗಾಳದ ಕಾಟನ್ ಸೀರೆಗಳು ಪ್ರದರ್ಶನಕ್ಕೆ ಇವೆ.

ಕೇವಲ ಕೈಮಗ್ಗ ಬಟ್ಟೆಗಳಲ್ಲದೆ, ಆಭರಣಗಳು, ಕುಂದನ್, ಮೀನಾಕರಿ, ಕಾಗದದ ಹವಳ, ಚಿತ್ರಕಲಾಕೃತಿ, ಚರ್ಮೋತ್ಪನ್ನ, ಮರ, ದಂತ, ಗಾಜಿನಲ್ಲಿ ಕುಸುರಿ ಮಾಡಿರುವ ಆಲಂಕಾರಿಕ ವಸ್ತುಗಳು, ಕಂಚು, ಬೆಳ್ಳಿ ಮತ್ತು ಚಿನ್ನದ ಆಭರಣಗಳೂ ಇಲ್ಲಿ ದೊರೆಯುತ್ತವೆ.

ಇದರ ಜೊತೆಗೆ ನೆಲಹಾಸು, ಡುರೀಸ್, ಮೊಜಾರಿಸ್, ಮಾರ್ಬಲ್ ಕ್ರಾಫ್ಟ್, ಗುಜರಾತಿನ ಬಾಂದನಿ ಕಲೆಯನ್ನು ಒಳಗೊಂಡ ಬಗೆಬಗೆಯ ಬಟ್ಟೆಗಳ ಪ್ರದರ್ಶನವೂ ಇಲ್ಲಿದೆ. ಪ್ರದರ್ಶನ ಜೂನ್ 11ರಂದು ಮುಕ್ತಾಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry