‘ಸಾಹೊ’ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ?

7

‘ಸಾಹೊ’ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ?

Published:
Updated:
‘ಸಾಹೊ’ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ?

ಹೈದರಾಬಾದ್‌: ‘ಬಾಹುಬಲಿ 2’ ಚಿತ್ರದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಪ್ರಭಾಸ್ – ಅನುಷ್ಕಾ ಶೆಟ್ಟಿ ಮುಂಬರಲಿರುವ ‘ಸಾಹೊ’ ಚಿತ್ರದಲ್ಲೂ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿಗಳು ತೆಲುಗು ಸಿನಿಲೋಕದಲ್ಲಿ ಹರಿದಾಡುತ್ತಿವೆ.

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರದಲ್ಲಿ ಪ್ರಭಾಸ್ – ಅನುಷ್ಕಾ ಶೆಟ್ಟಿ ಜೋಡಿಯ ರೊಮ್ಯಾನ್ಸ್‌ ಚಿತ್ರದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು ಎಂಬುದು ಸಿನಿತಜ್ಞರ ಅನಿಸಿಕೆ.

ಇದೇ ಜೋಡಿ ‘ಸಾಹೊ’ ಚಿತ್ರದಲ್ಲೂ ಮುಂದುವರಿದರೆ ಆ ಚಿತ್ರವೂ ಭಾರೀ ಯಶಸ್ಸು ಗಳಿಸಲಿದೆ ಎಂಬ ಲೆಕ್ಕಾಚಾರ ತೆಲುಗು ಚಿತ್ರೋದ್ಯಮದಲ್ಲಿ ಶುರುವಾಗಿದೆ.

‘ಸಾಹೊ’ ಚಿತ್ರದ ನಾಯಕರನ್ನಾಗಿ ಪ್ರಭಾಸ್‌ ಅವರನ್ನು ಘೋಷಿಸಿರುವ ಚಿತ್ರತಂಡ ಚಿತ್ರದಲ್ಲಿ ಪ್ರಭಾಸ್‌ಗೆ ಯಾರು ನಾಯಕಿರಾಗಲಿದ್ದಾರೆ ಎಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.

ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್‌ ನಟಿಯರಾದ ಶ್ರದ್ಧಾ ಕಪೂರ್‌, ದಿಶಾ ಪಟಾನಿ, ಕತ್ರೀನಾ ಕೈಫ್‌ ಹೆಸರುಗಳು ಕೇಳಿಬಂದಿದ್ದವು. ಆದರೆ ಚಿತ್ರತಂಡ ಇನ್ನೂ ಯಾರನ್ನೂ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿಲ್ಲ.

ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣವೂ ಆರಂಭವಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

‘ಬಾಹುಬಲಿ’ ಯಶಸ್ಸಿನ ನಂತರ ‘ಸಾಹೊ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry