ಏಕೆ ಬೇಕು ಮುಗಿದ ಚಿತ್ರದ ಮಾತು ಎಂದ ಶ್ರೀದೇವಿ

7

ಏಕೆ ಬೇಕು ಮುಗಿದ ಚಿತ್ರದ ಮಾತು ಎಂದ ಶ್ರೀದೇವಿ

Published:
Updated:
ಏಕೆ ಬೇಕು ಮುಗಿದ ಚಿತ್ರದ ಮಾತು ಎಂದ ಶ್ರೀದೇವಿ

‘ಬಾಹುಬಲಿ’ ಚಿತ್ರದ್ದು ಮುಗಿದ ವಿಚಾರ. ಅದರ ಮಾತು ಈಗ ಏತಕ್ಕೆ? ಎಂದು ಮಾಧ್ಯಮದವರ ಬಾಯಿ ಮುಚ್ಚಿಸಿದ್ದಾರೆ, ಹಿರಿಯ ನಟಿ ಶ್ರೀದೇವಿ.

ಭಾರಿ ಜನಮನ್ನಣೆ ಗಳಿಸಿರುವ ‘ಬಾಹುಬಲಿ’ ಚಿತ್ರದ ನಟನೆಯಿಂದ ಶ್ರೀದೇವಿ ಹಿಂದೆ ಸರಿದಿದ್ದ ವಿಚಾರವನ್ನು  ಕೆದಕಿದಾಗ ಅವರು ಹೀಗೆ ಕೇಳಿದ್ದಾರೆ.

ತಮ್ಮ ಮುಂದಿನ ಚಿತ್ರ ‘ಮಾಮ್‌’ನ ಪ್ರಚಾರ ಕಾರ್ಯಕ್ರಮದ ವೇಳೆ ಮಾತನಾಡಿದ ಶ್ರೀದೇವಿ, ‘ಬಾಹುಬಲಿ ಸಿನಿಮಾ ತೆರೆ ಕಂಡಿದೆ. ಯಶಸ್ಸನ್ನೂ ಗಳಿಸಿದೆ. ನಾನು ನಟಿಸಬೇಕಿದ್ದ ‘ಶಿವಗಾಮಿ’ ಪಾತ್ರದಲ್ಲಿ ಆ ಚಿತ್ರದ ಎರಡೂ ಅವತರಣಿಕೆಗಳಲ್ಲಿ ಮತ್ತೊಬ್ಬರು ನಟಿಸಿದ್ದೂ ಆಗಿದೆ. ಈಗ ಅದರ ಬಗ್ಗೆ ಯಾಕೆ ಮಾತು? ಎಂದು ಶಾಂತವಾಗಿಯೇ ಪ್ರಶ್ನಿಸಿದರು.

ತಮಿಳಿನಲ್ಲಿ ವಿಜಯ್‌ ನಾಯಕನಾಗಿ ನಟಿಸಿದ್ದ ‘ಪುಲಿ’ ಚಿತ್ರದಲ್ಲಿ ನಟಿಸುವ ಸಲುವಾಗಿ ‘ಬಾಹುಬಲಿ’ ಚಿತ್ರದ ನಟನೆಯಿಂದ ಶ್ರೀದೇವಿ ಹಿಂದೆ ಸರಿದಿದ್ದರು.

ಇದಾದ ನಂತರ, ‘ಶ್ರೀದೇವಿ ಬಾಹುಬಲಿಯಲ್ಲಿ ನಟಿಸಲು ಹೆಚ್ಚಿನ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಹಾಗಾಗಿ ನಿರ್ದೇಶಕ ರಾಜಮೌಳಿ ತಮ್ಮ ಚಿತ್ರಕ್ಕೆ ರಮ್ಯಕೃಷ್ಣ ಅವರನ್ನು ಕರೆತಂದಿದ್ದಾರೆ’ ಎನ್ನುವ ಗಾಳಿಸುದ್ದಿ ಹರಿದಾಡಿದ್ದವು. ತಮಿಳು ಚಿತ್ರ ‘ಪುಲಿ’ಯಲ್ಲಿ ಕನ್ನಡದ ನಟ ಸುದೀಪ್‌ ಸಹ ನಟಿಸಿ ಗಮನ ಸೆಳೆದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry