ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಲಂಕಾಗೆ 322 ರನ್‌ಗಳ ಗೆಲುವಿನ ಗುರಿ

7

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಲಂಕಾಗೆ 322 ರನ್‌ಗಳ ಗೆಲುವಿನ ಗುರಿ

Published:
Updated:
ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಲಂಕಾಗೆ 322 ರನ್‌ಗಳ ಗೆಲುವಿನ ಗುರಿ

ಲಂಡನ್‌ :  ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ಶ್ರೀಲಂಕಾಗೆ 322 ರನ್‌ಗಳ ಗೆಲುವಿನ ಗುರಿ ನೀಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 321 ರನ್‌ ಗಳಿಸಿತು. ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತದ ಪರ ಶಿಖರ್‌ ಧವನ್‌  ಅಮೋಘ ಶತಕ ದಾಖಲಿಸಿದರು. ರೋಹಿತ್‌ ಶರ್ಮಾ ಮತ್ತು ಮಹೇಂದ್ರ ಸಿಂಗ್ ದೋನಿ ಅರ್ಧಶತಕ ಗಳಿಸಿದರು.  ವೇಗದ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇದಾರ್ ಜಾದವ್‌ 25 ರನ್‌ ಸಿಡಿಸಿದರು.

ಶ್ರೀಲಂಕಾದ ಪರ ಮಲಿಂಗ 2 ವಿಕೆಟ್‌ ಪಡೆದರೆ, ಪ್ರದೀಪ್‌, ಲಕ್‌ಮಲ್‌, ಪೆರೇರಾ, ಗುಣರತ್ನೆ ತಲಾ 1 ವಿಕೆಟ್‌ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry