ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಬ್ಯಾಂಕಿಂಗ್‌ನಿಂದ ಐದಾರು ವರ್ಷಗಳಲ್ಲಿ ಭೌತಿಕ ಬ್ಯಾಂಕ್‌ ಅವಸಾನ

Last Updated 8 ಜೂನ್ 2017, 16:57 IST
ಅಕ್ಷರ ಗಾತ್ರ

ನವದೆಹಲಿ: ಕಡಿಮೆ ಬಡ್ಡಿದರ ಆಧಾರಿತ ವಹಿವಾಟು ಮತ್ತು ಆಧುನಿಕ ತಂತ್ರಜ್ಞಾನದ ವ್ಯವಹಾರ ಸಾಮರ್ಥ್ಯದಿಂದ ಮುಂದಿನ ಐದಾರು ವರ್ಷಗಳಲ್ಲಿ ಭೌತಿಕ ಬ್ಯಾಂಕ್‌(ನೇರ ಬ್ಯಾಂಕಿಂಗ್‌ ವಹಿವಾಟು) ವ್ಯವಸ್ಥೆ ಅವಸಾನಗೊಳ್ಳಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯದರ್ಶಿ ಅಮಿತಾಬ್ ಕಾಂತ್‌ ಹೇಳಿದ್ದಾರೆ.

ಗುರುವಾರ ಐಎಎಂಎಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಐದು ಆರು ವರ್ಷಗಳಲ್ಲಿ ನೇರ ಬ್ಯಾಂಕಿಂಗ್‌(ಗ್ರಾಹಕ ಮತ್ತು ಬ್ಯಾಂಕ್‌ಗಳ ಮುಖಾ ಮುಖಿಯಾಗುವ ಭೌತಿಕ ವಹಿವಾಟು) ವ್ಯವಸ್ಥೆ ಅವಸಾನ ಹೊಂದಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭೌತಿಕ ಬ್ಯಾಂಕುಗಳ ವೆಚ್ಚವು ಅಗಾಧವಾಗಿರುವ ಕಾರಣ ಬೌತಿಕ ಬ್ಯಾಂಕ್‌ಗಳು ಹೆಚ್ಚು ಕಾಲ ಆಸ್ತಿತ್ವದಲ್ಲಿ ಉಳಿಯುವುದು ಸವಾಲಿನ ಹಾಗೂ ಕಷ್ಟಕರವಾಗಿದೆ. ಆನ್‌ಲೈನ್‌ ಸಲಕರಣೆಗಳು ಸ್ಟಾರ್ಟ್‌ಅಪ್‌ ಮತ್ತು ಸಾಲ ನೀಡುವಿಕೆಯನ್ನು ವಿಶ್ಲೇಷಣೆ ಮಾಡಲು ಅನುಕೂಲಕರವಾಗಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್‌ ಆಧಾರಿತ ವ್ಯವಹಾರದ ವಿಸ್ತರಣೆಯೊಂದಿಗೆ, ಆರ್ಥಿಕ ತಂತ್ರಜ್ಞಾನ ಸಂಸ್ಥೆಯು ವಿಶ್ಲೇಷಣೆ ಮಾಡಲು ಸುಲಭವಾಗುವುದು ಮತ್ತು ಅದು ಅಗತ್ಯವಿರುವ ವ್ಯಕ್ತಿಗೆ ಸಾಲ ಒದಗಿಸುವಲ್ಲಿ ನೆರವಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT