ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ: ಭಾರತೀಯ ಸೇರಿ 12 ಗಗನಯಾತ್ರಿಗಳ ಆಯ್ಕೆ

Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮುಂದಿನ ಬಾಹ್ಯಾಕಾಶ ಯಾತ್ರೆಗಳಿಗಾಗಿ ಹೊಸದಾಗಿ 12 ಗಗನಯಾನಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಭಾರತ ಮೂಲದ ರಾಜಾಚಾರಿ (39) ಅವರೂ ಒಬ್ಬರು.

ಇವರು ಅಮೆರಿಕ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಗನಯಾತ್ರಿ ಆಗಲು ಇಚ್ಛಿಸಿ 18,300 ಮಂದಿ ಅರ್ಜಿ ಸಲ್ಲಿಸಿದ್ದರು.

ಅಮೆರಿಕದ ಲೊವಾ ರಾಜ್ಯದ ರಾಜಾಚಾರಿ ಅವರು, ಅಮೆರಿಕ ಏರ್‌ ಫೋರ್ಸ್‌ ಅಕಾಡೆಮಿಯಿಂದ ಬಾಹ್ಯಾಕಾಶ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಮೆಸಾಚ್ಯುಸೆಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ವಾಯುಯಾನ ವಿಜ್ಞಾನದಲ್ಲಿ (ಏರೊನಾಟಿಕ್ಸ್) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕದ ನೇವಲ್ ಪೈಲಟ್ ಸ್ಕೂಲ್‌ನಿಂದಲೂ ಪದವಿ ಪಡೆದಿದ್ದಾರೆ.

1989ರಿಂದ ಆರಂಭಿಸಿ, ನಾಸಾ ಈವರೆಗೆ 350 ಗಗನಯಾನಿಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಗಗನಯಾತ್ರಿಗಳು  ಆಗಸ್ಟ್‌ನಿಂದ 2 ವರ್ಷಗಳವರೆಗೆ ತರಬೇತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT