ಗಿರಿಜಾ ಹೆಗ್ಡೆ ನಿಧನ

7

ಗಿರಿಜಾ ಹೆಗ್ಡೆ ನಿಧನ

Published:
Updated:
ಗಿರಿಜಾ ಹೆಗ್ಡೆ ನಿಧನ

ಕುಂದಾಪುರ: ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರ ತಾಯಿ ಗಿರಿಜಾ ಹೆಗ್ಡೆ (92) ಬುಧವಾರ ರಾತ್ರಿ ಬೆಂಗಳೂರಿನ ಇಂದಿರಾನಗರದ ಪುತ್ರನ (ಜಯಪ್ರಕಾಶ) ನಿವಾಸದಲ್ಲಿ ನಿಧನರಾಗಿದ್ದಾರೆ. ನಿವೃತ್ತ ನ್ಯಾಯಾಧೀಶ ದಿವಂಗತ ಕೆ.ಸಿ.ಹೆಗ್ಡೆ ಅವರ ಧರ್ಮಪತ್ನಿಯಾಗಿದ್ದ ಅವರು, ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.

ಅವರಿಗೆ ಅಳಿಯ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಮೂವರು ಪುತ್ರರು ಹಾಗೂ ಐವರು ಪುತ್ರಿಯರು ಇದ್ದಾರೆ.

ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಕುಂದಾಪುರ ತಾಲ್ಲೂಕಿನ ಕೂರ್ಗಿ ಗ್ರಾಮದಲ್ಲಿನ ಮೂಲ ಮನೆಗೆ ತಂದು ಸಾರ್ವಜನಿಕ ದರ್ಶನ ಇಡಲಾಗಿತ್ತು, ಬಳಿಕ  ಅಂತ್ಯಸಂಸ್ಕಾರ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry