ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಭುವನೇಶ್ವರ್ ಆತಿಥ್ಯ

7

ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಭುವನೇಶ್ವರ್ ಆತಿಥ್ಯ

Published:
Updated:
ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಭುವನೇಶ್ವರ್ ಆತಿಥ್ಯ

ಭುವನೇಶ್ವರ: ಜುಲೈ 6 ರಿಂದ 9ರವರೆಗೆ ನಡೆಯುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಭುವನೇಶ್ವರ ಆತಿಥ್ಯ ವಹಿಸಲಿದೆ.

45 ರಾಷ್ಟ್ರಗಳಿಂದ 1000ಕ್ಕೂ ಹೆಚ್ಚು  ಅಥ್ಲೀಟ್‌ಗಳು ಇಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 42 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಲಂಡನ್‌ನಲ್ಲಿ ಆಗಸ್ಟ್‌ ತಿಂಗಳಿನಲ್ಲಿ ನಡೆಯುವ ಐಎಎಫ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಇದು ಅರ್ಹತಾ ಟೂರ್ನಿ ಎನಿಸಿದೆ.

2015ರಲ್ಲಿ ಚೀನಾದ ವುಹಾನ್‌ನಲ್ಲಿ ನಡೆದ ಟೂರ್ನಿಯಲ್ಲಿ 40 ರಾಷ್ಟ್ರಗಳಿಂದ 497 ಸ್ಪರ್ಧಿಗಳು ಕಣಕ್ಕಿಳಿದಿದ್ದರು. ಆದರೆ ಈ ಬಾರಿ ಸ್ಪರ್ಧಿಗಳ ಸಂಖ್ಯೆ ದುಪ್ಪಟ್ಟಾಗಲಿದೆ.

1989ರಲ್ಲಿ ನವದೆಹಲಿ ಹಾಗೂ ಪುಣೆಯಲ್ಲಿ ಟೂರ್ನಿ ನಡೆದಿತ್ತು. ಈ ಚಾಂಪಿಯನ್‌ಷಿಪ್‌ ಆಯೋಜಿಸಿದ ಭಾರತದ ಮೂರನೇ ನಗರ ಎಂಬ ಹೆಗ್ಗಳಿಕೆಗೆ ಭುವನೇಶ್ವರ ಪಾತ್ರವಾಗಿದೆ.

‘ಒಡಿಶಾದ ಅಥ್ಲೀಟ್‌ಗಳ ಪಾಲಿಗೆ ಇದು ಸ್ಮರಣೀಯ ಚಾಂಪಿಯನ್‌ಷಿಪ್ ಎನಿಸಲಿದೆ’ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ‘ಕಳಿಂಗ ಕ್ರೀಡಾಂಗಣದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗಾಗಿ ಎದುರು ನೋಡುತ್ತಿದ್ದೇನೆ. ಇಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ದಿನಗಳು ನೆನಪಾಗುತ್ತವೆ’ ಎಂದು ಅಥ್ಲೀಟ್ ದ್ಯುತಿ ಚಾಂದ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry