ಸೆಹ್ವಾಗ್ ಕಲಿಸಿದ ಪಾಠ ನೆನಪಿಸಿಕೊಂಡ ಅಶ್ವಿನ್

7

ಸೆಹ್ವಾಗ್ ಕಲಿಸಿದ ಪಾಠ ನೆನಪಿಸಿಕೊಂಡ ಅಶ್ವಿನ್

Published:
Updated:
ಸೆಹ್ವಾಗ್ ಕಲಿಸಿದ ಪಾಠ ನೆನಪಿಸಿಕೊಂಡ ಅಶ್ವಿನ್

ನವದೆಹಲಿ: ‘ಉತ್ತಮ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಒಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬ ಪಾಠ

ವನ್ನು ವೀರೇಂದ್ರ ಸೆಹ್ವಾಗ್ ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನನಗೆ  ಹೇಳಿಕೊಟ್ಟಿದ್ದರು’-

ಭಾರತ ತಂಡದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ನುಡಿ ಗಳಿವು. ವರ್ಷಗಳ ಹಿಂದೆ ದಂಬುಲಾದಲ್ಲಿ ನಡೆಯುತ್ತಿದ್ದ ಸರಣಿಯ ಸಂದರ್ಭದಲ್ಲಿ ಸೆಹ್ವಾಗ್ ಅವರು ನೆಟ್ಸ್‌ನಲ್ಲಿ ತಮ್ಮ ಉತ್ತಮ ಎಸೆತಗಳನ್ನು ಸುಲಭವಾಗಿ ಎದುರಿಸಿದ್ದ ಸಂದರ್ಭವನ್ನು ಅವರು ‘ವಾಕ್‌ ದಿ ಡಕ್ 2’ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

‘ನಾನು ಆಗಿನ್ನೂ  ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಲೂರಲು ಪ್ರಯತ್ನಿಸುತ್ತಿದ್ದೆ. ಆ ದಿನ ನೆಟ್ಸ್‌ನಲ್ಲಿ ಇಬ್ಬರೂ ಅಭ್ಯಾಸ ನಡೆಸಿದೆವು. ಆಫ್‌ಸ್ಟಂಪ್ ಹೊರಗೆ ಹಾಕಿದ ಮೊದಲ ಎಸೆತವನ್ನು ಸೆಹ್ವಾಗ್ ಕಟ್ ಮಾಡಿದರು. ನಂತರದ ಎಸೆತವನ್ನು ಸ್ಪಂಪ್‌ಗೆ ನೇರ ಲೈನ್‌ನಲ್ಲಿ ಹಾಕಿದೆ ಅದನ್ನೂ ಕಟ್ ಮಾಡಿದರು.

ಮಿಡಲ್ ಸ್ಟಂಪ್ ಲೈನ್ ಎಸೆತಕ್ಕೂ ಅದೇ ಪ್ರತಿಕ್ರಿಯೆ. ನನಗೆ ಅಚ್ಚರಿಯಾಗಿತ್ತು. ಫುಲ್‌ ಲೆಂಗ್ತ್ ಎಸೆತ ಹಾಕಿದಾಗ ಮುನ್ನುಗ್ಗಿ ಸಿಕ್ಸರ್‌ಗೆ ಎತ್ತಿಬಿಟ್ಟರು. ಇದರಿಂದ ವಿಚಲಿತನಾದ ನಾನು ಅವರ ಬಳಿ ಹೋಗಿ ಬೌಲಿಂಗ್ ಬಗ್ಗೆ ವಿಚಾರಿಸಿದೆ. ಅವರು ಆಗ ಹೇಳಿದ್ದ ಮಾತುಗಳು ಬೇಸರ ಮೂಡಿಸಿತ್ತು’ ಎಂದರು.

‘ನಾನು ಆಫ್‌ಸ್ಪಿನ್ನರ್‌ಗಳನ್ನು ಬೌಲರ್‌ಗಳೆಂದು ಪರಿಗಣಿಸುವುದಿಲ್ಲ. ಅವರ ಎಸೆತಗಳು ಯಾವತ್ತೂ ನನಗೆ ಕಷ್ಟವೆನಿಸಿಲ್ಲ ಎಂದು ಸೆಹ್ವಾಗ್ ಹೇಳಿದ್ದರು. ಅದು ನನಗೆ ತೀವ್ರ ಬೇಸರ ತರಿಸಿತ್ತು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದೆ. ಮರುದಿನ ಮತ್ತೆ ವಿಭಿನ್ನ ರೀತಿಯಲ್ಲಿ ಎಸೆತಗಳನ್ನು ಹಾಕಿದೆ. ಅವೆಲ್ಲವೂ ಉತ್ತಮ ಎಸೆತಗಳಾಗಿದ್ದವು. ಪ್ರತಿಯೊಂದನ್ನೂ ದಂಡಿಸಿದರು.

ಆಗ ನಾನು ಕೆಟ್ಟ ರೀತಿಯಲ್ಲಿ ಬೌಲಿಂಗ್ ಮಾಡಿದೆ ಅವರು ವಿಫಲರಾದರು. ಬೌಲರ್‌ಗಳ ಉತ್ತಮ ಎಸೆತಗಳನ್ನು ಹೊಡೆದು ಎದೆಗುಂದಿಸುವ ಇವರಿಗೆ ಕೆಟ್ಟ ಎಸೆತಗಳೇ ಪರಿಹಾರ ಎಂದು ಪರಿಗಣಿಸಿದೆ. ಐಪಿಎಲ್‌ನಲ್ಲಿ ಹಲವು ಬಾರಿ ಅವರ ವಿಕೆಟ್‌ ಪಡೆದೆ’ ಎಂದು ಚೆನ್ನೈನ ಆಶ್ವಿನ್ ನೆನಪಿನ ಬುತ್ತಿ ಬಿಚ್ಚಿದರು.

‘ಸೆಹ್ವಾಗ್ ಅವರು ಸದಾ ತಮ್ಮ ಬ್ಯಾಟಿಂಗ್ ಬಗ್ಗೆಯೇ ಚಿಂತಿಸುತ್ತಿದ್ದರು. ತಂಡದ ಸಭೆಗಳಲ್ಲಿಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ಪಂದ್ಯದಲ್ಲಿ ತಮ್ಮ ಕಾಣಿಕೆ ನೀಡುವುದರತ್ತ ಅವರ ಚಿತ್ತ ಇರುತ್ತಿತ್ತು’ ಎಂದು ಆಶ್ವಿನ್ ಹೇಳಿದರು. ಭಾರತ ತಂಡಕ್ಕೆ ಮುಖ್ಯ ಕೋಚ್ ಸ್ಥಾನಕ್ಕಾಗಿ ಸೆಹ್ವಾಗ್ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry