ಹೆಣ್ಣುಮಗುವಿನ ತಂದೆಯಾದ ಜಡೇಜ

7

ಹೆಣ್ಣುಮಗುವಿನ ತಂದೆಯಾದ ಜಡೇಜ

Published:
Updated:
ಹೆಣ್ಣುಮಗುವಿನ ತಂದೆಯಾದ ಜಡೇಜ

ರಾಜ್‌ಕೋಟ್‌: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಗುರುವಾರ ತಂದೆ ಯಾಗಿದ್ದಾರೆ.ಜಡೇಜ ಅವರ ಪತ್ನಿ ರೀವಾ ಸೋಲಂಕಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗು ಆರೋಗ್ಯ ವಾಗಿದ್ದಾರೆ ಎಂದು ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡುತ್ತಿರುವ ಜಡೇಜ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪತ್ನಿ ಹಾಗೂ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಜಡೇಜ ದಂಪತಿಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ.

‘ರೀವಾ ಮತ್ತು ಜಡೇಜ ದಂಪತಿಗೆ ಶುಭಾಶಯಗಳು. ನಿಮ್ಮ ಮುಂದಿನ ಬದುಕು ಇನ್ನಷ್ಟು ಸುಖಕರವಾಗಿರಲಿ. ನಿಮ್ಮ ಮುದ್ದು ಮಗುವಿಗೆ ದೇವರು ದೀರ್ಘ ಆಯಸ್ಸು ಮತ್ತು ಆರೋಗ್ಯ ಕರುಣಿಸಲಿ’ ಎಂದು ಕ್ರಿಕೆಟಿಗ ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry