ನಾರ್ವೆ ಚೆಸ್: ಆನಂದ್‌ಗೆ ನಿರಾಸೆ

7

ನಾರ್ವೆ ಚೆಸ್: ಆನಂದ್‌ಗೆ ನಿರಾಸೆ

Published:
Updated:
ನಾರ್ವೆ ಚೆಸ್: ಆನಂದ್‌ಗೆ ನಿರಾಸೆ

ಸ್ಟಾವಂಗರ್: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ವಿಶ್ವನಾಥನ್ ಆನಂದ್ ಅಲ್ಟಿಬಾಕ್ಸ್‌ ನಾರ್ವೆ ಚೆಸ್ ಟೂರ್ನಿಯಲ್ಲಿ ಬುಧವಾರ ಸೋಲು ಕಂಡಿದ್ದಾರೆ.

ಬಿಳಿ ಕಾಯಿಗಳೊಂದಿಗೆ ಆಡಿದ ಭಾರತದ ಆಟಗಾರ ಎರಡನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ವ್ಲಾದಿಮಿರ್ ಕ್ರಾಮನಿಕ್ ಎದುರು ಪರಾಭವಗೊಂಡರು. ಮೊದಲ ಸುತ್ತಿನಲ್ಲಿ ಭಾರತದ ಆಟಗಾರ ಡ್ರಾ ಸಾಧಿಸಿದ್ದರು.

ದಿನದ ಇತರ ಪಂದ್ಯಗಳಲ್ಲಿ ಅಮೆರಿಕಾದ ಹಿಕಾರು ನಕಮುರಾ ಅರ್ಮೇನಿಯಾದ ಲೆವೊನ್‌ ಅರೊನಿಯನ್ ಎದುರು ಡ್ರಾ ಮಾಡಿಕೊಂಡರು.

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅಮೆರಿಕದ ಫ್ಯಾಬಿಯಾನೊ ಕರುವಾನ ಎದುರು ಪಾಯಿಂಟ್ಸ್ ಹಂಚಿಕೊಂಡರು. ಮೊದಲ ಪಂದ್ಯದಲ್ಲೂ ಅವರು ಡ್ರಾ ಮಾಡಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry