ಫೋಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ

7

ಫೋಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ

Published:
Updated:
ಫೋಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ

ನ್ಯೂಯಾರ್ಕ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಫೋಬ್ಸ್‌ ನಿಯತಕಾಲಿಕೆ ಗುರುವಾರ ಪ್ರಕಟಿಸಿರುವ  2017ನೇ ಸಾಲಿನ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಜೂನ್‌ 2016ರಿಂದ ಜೂನ್‌ 2017ರ ಅವಧಿಯಲ್ಲಿ ಕ್ರೀಡಾಪಟುಗಳು ಪಂದ್ಯದ ಸಂಭಾವನೆ, ಬಹುಮಾನ ಮೊತ್ತ ಮತ್ತು  ಜಾಹೀರಾತಿನಿಂದ ಗಳಿಸಿರುವ ಒಟ್ಟು ಆದಾಯದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಬಲಗೈ ಬ್ಯಾಟ್ಸ್‌ಮನ್‌ ವಿರಾಟ್‌ 89ನೇ ಸ್ಥಾನ ಗಳಿಸಿದ್ದಾರೆ. ಅವರು ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರ ಆಗಿದ್ದಾರೆ.

ವಿರಾಟ್‌ ಅವರು ಒಟ್ಟಾರೆ ₹141 ಕೋಟಿ ಆದಾಯ ಹೊಂದಿದ್ದಾರೆ. ಇದರಲ್ಲಿ  ಪ್ರಶಸ್ತಿಗಳು ಮತ್ತು ಪಂದ್ಯದ ಸಂಭಾವನೆಯ ರೂಪದಲ್ಲಿ ₹19.28 ಕೋಟಿ ಪಡೆದಿದ್ದು, ಜಾಹೀರಾತಿನಿಂದ ₹ 122 ಕೋಟಿ ಗಳಿಸಿದ್ದಾರೆ.

ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನ ಹೊಂದಿದ್ದಾರೆ. ಅಮೆರಿಕದ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಅವರು ಪಟ್ಟಿಯಲ್ಲಿರುವ ಏಕೈಕ ಮಹಿಳೆ ಎಂಬ ಹಿರಿಮೆ ಹೊಂದಿದ್ದಾರೆ. ಅವರು ಒಂದು ವರ್ಷದಲ್ಲಿ ₹173 ಕೋಟಿ ಆದಾಯ ಗಳಿಸಿದ್ದು 51ನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry