ನಗರದ ಬಾಲಕಿಗೆ ಇಂಗ್ಲೆಂಡ್‌ ಪ್ರಶಸ್ತಿ

7

ನಗರದ ಬಾಲಕಿಗೆ ಇಂಗ್ಲೆಂಡ್‌ ಪ್ರಶಸ್ತಿ

Published:
Updated:
ನಗರದ ಬಾಲಕಿಗೆ ಇಂಗ್ಲೆಂಡ್‌ ಪ್ರಶಸ್ತಿ

ಬೆಂಗಳೂರು: ನಗರದ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ನಿಖಿಯಾ ಶಂಷೇರ್‌ ಅವರಿಗೆ ಇಂಗ್ಲೆಂಡ್‌ನ ‘ಡಯಾನಾ ಲೆಗಸಿ ಪ್ರಶಸ್ತಿ’ ದೊರೆತಿದೆ.

ಈ ಪ್ರಶಸ್ತಿಗಾಗಿ ವಿಶ್ವದಾದ್ಯಂತ 12,000 ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. 20 ವಿದ್ಯಾರ್ಥಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ನಿಖಿಯಾ.

ಅವರು ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದು, ಆ ಮೂಲಕ ಕೆಲ ಸರ್ಕಾರಿ ಶಾಲೆಗಳಿಗೆ ಪ್ರಯೋಗಾಲಯ ಸ್ಥಾಪಿಸುವ ಜತೆಗೆ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿದ್ದಾರೆ. ಇದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್‌

ರಾಜಕುಮಾರ ವಿಲಿಯಂ ಪ್ರಶಸ್ತಿ  ಪ್ರದಾನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry