ವಿಮಾನ ಟಿಕೆಟ್‌ಗೆ ವಿಶಿಷ್ಟ ಗುರುತಿನ ಚೀಟಿ ?

7

ವಿಮಾನ ಟಿಕೆಟ್‌ಗೆ ವಿಶಿಷ್ಟ ಗುರುತಿನ ಚೀಟಿ ?

Published:
Updated:
ವಿಮಾನ ಟಿಕೆಟ್‌ಗೆ ವಿಶಿಷ್ಟ ಗುರುತಿನ ಚೀಟಿ ?

ನವದೆಹಲಿ: ವಿಮಾನ ಪ್ರಯಾಣಕ್ಕೆ ಟಿಕೆಟ್‌ ಕಾಯ್ದಿರಿಸಲು ‘ಡಿಜಿಟಿಲ್‌ ವಿಶಿಷ್ಟ ಗುರುತಿನ ಚೀಟಿ’ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕಾಗದ ರಹಿತ ಪ್ರಯಾಣಕ್ಕಾಗಿ ‘ಡಿಜಿಟಿಲ್‌ ವಿಶಿಷ್ಟ ಗುರುತಿನ ಚೀಟಿ’ ವ್ಯವಸ್ಥೆ ಪರಿಚಯಿಸಲು ಸಚಿವಾಲಯ ಯೋಜನೆ ರೂಪಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ  ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಆಧಾರ್‌, ಪಾನ್‌ಕಾರ್ಡ್‌, ಪಾಸ್‌ಪೋರ್ಟ್‌ ಸಂಖ್ಯೆ ಇವುಗಳನ್ನು ವಿಶಿಷ್ಟ ಗುರುತಿನ ಚೀಟಿಯಾಗಿ ಪರಿಗಣಿಸುವ ಪ್ರಸ್ತಾವನೆ ಇದೆ. ಆದರೆ ಆಧಾರ್‌ ಕಡ್ಡಾಯಗೊಳಿಸುವುದಿಲ್ಲ. ಬದಲಿಗೆ ಇದು ಒಂದು ಆಯ್ಕೆ ಅಷ್ಟೆ ಎಂದು ಅವರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry