ಬಿಹಾರ: ಹಳೆಯ ಮದ್ಯ ರಫ್ತಿಗೆ ಅವಕಾಶ ನೀಡಿದ ‘ಸುಪ್ರೀಂ’

7

ಬಿಹಾರ: ಹಳೆಯ ಮದ್ಯ ರಫ್ತಿಗೆ ಅವಕಾಶ ನೀಡಿದ ‘ಸುಪ್ರೀಂ’

Published:
Updated:
ಬಿಹಾರ: ಹಳೆಯ ಮದ್ಯ ರಫ್ತಿಗೆ ಅವಕಾಶ ನೀಡಿದ ‘ಸುಪ್ರೀಂ’

ನವದೆಹಲಿ: ತಮ್ಮ ಬಳಿ ಇರುವ ಹಳೆಯ ಮದ್ಯಸಂಗ್ರಹವನ್ನು ರಾಜ್ಯದಿಂದ ಹೊರಗೆ ರಫ್ತು ಮಾಡಲು ಬಿಹಾರದ ಮದ್ಯತಯಾರಕರಿಗೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ.

ಮದ್ಯ ಮಾರಾಟ ಹಾಗೂ ಸೇವನೆ ನಿಷೇಧವಾಗುವುದಕ್ಕೂ ಮುಂಚೆ ಸಂಗ್ರಹಿಸಿರುವ ಮದ್ಯವನ್ನು ಜುಲೈ 31ರವರೆಗೂ ರಫ್ತು ಮಾಡಬಹುದು.

ಮದ್ಯ ತಯಾರಕರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಹಾಗೂ ದೀಪಕ್‌ ಗುಪ್ತ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ ಮೇ 29ರಂದು ನೀಡಿದ್ದ ತನ್ನ ಆದೇಶದಲ್ಲಿ, ರಾಜ್ಯದಲ್ಲಿ ಸಂಗ್ರಹವಿರುವ ಮದ್ಯ ನಾಶಪಡಿಸಲು ನೀಡಲಾಗಿರುವ ಕಾಲಾವಕಾಶ ಕುರಿತು ಮಾತ್ರ ಉಲ್ಲೇಖಿಸಿತ್ತು. ಆದರೆ, ರಾಜ್ಯದ ಹೊರಗೆ ಹಳೆಯ ಮದ್ಯ ‘ರಫ್ತು’ ಮಾಡುವ ಕುರಿತು ಯಾವುದೇ ಸೂಚನೆ ನೀಡಿರಲಿಲ್ಲ. ಆದ್ದರಿಂದ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಮದ್ಯ ತಯಾರಕರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

‘ಮದ್ಯ ಸಂಗ್ರಹ ನಾಶ ಮಾಡಲು ನೀಡಿರುವ ಅವಧಿಯನ್ನು 2017ರ ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಇನ್ನು ಮುಂದೆ ಕಾಲಾವಕಾಶ ವಿಸ್ತರಿಸಲಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮೇ 29ರ ಆದೇಶದಲ್ಲಿ ಹೇಳಿತ್ತು.

ಬಿಹಾರದಲ್ಲಿ ಮದ್ಯ ಮಾರಾಟ ಹಾಗೂ ಸೇವನೆ ನಿಷೇಧಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಅಕ್ಟೋಬರ್‌್ 2ರಂದು ನೂತನ ಕಾನೂನು ಜಾರಿಗೆ ತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry