ಏನಿದು ಮೀನಿನ ಪ್ರಸಾದ?: ಮುರ್ರೆಲ್ ಮೀನನ್ನು ಮನೆಯಲ್ಲೇ ತಯಾರಿಸಿದ ನಾಟಿ ಔಷಧಿಯಲ್ಲಿ ಮುಳುಗಿಸಿ ಜೀವಂತವಾಗಿ ರೋಗಿಗೆ ನುಂಗಲು ನೀಡಲಾಗುತ್ತದೆ. ಇದನ್ನು ಮೀನು ಪ್ರಸಾದವೆಂದು ಕರೆಯುತ್ತಾರೆ. ರೋಗಿಯ ಗಂಟಲಿನ ಮೂಲಕ ಹೊಟ್ಟೆ ಸೇರುವ ಈ ಚಿಕ್ಕ ಮೀನು, ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ ಎಂಬುದು ಬಥಿನಿ ಕುಟುಂಬದವರ ಅಭಿಪ್ರಾಯ. 1845 ರಲ್ಲಿ ಹಿಂದೂ ಸಂತರೊಬ್ಬರು ಈ ಕುಟುಂಬದವರಿಗೆ ಗಿಡಮೂಲಿಕೆ ತಳಿಯೊಂದನ್ನು ನೀಡಿದ್ದರು. ಅದರ ಸಹಾಯದಿಂದ ಬೆಳೆಸಿದ ಗಿಡವನ್ನು ಬಳಸಿಕೊಂಡು ಔಷಧಿ ತಯಾರಿಸಲಾಗುತ್ತದೆ. 1845ರಿಂದಲೂ ಪ್ರತಿ ವರ್ಷ ಔಷಧಿ ನೀಡುತ್ತಾ ಬರಲಾಗಿದೆ. ಮೀನಿನ ಜತೆ ನೀಡುವ ಔಷಧಿಯನ್ನು ಜರ್ಮನಿ ಹಾಗೂ ಜಪಾನಿನ ಪ್ರಯೋಗಾಲಯಗಳಲ್ಲಿಯೂ ಪರೀಕ್ಷಿಸಲಾಗಿದ್ದು, ಇದರಿಂದ ಯಾವುದೇ ಅಪಾಯವಿಲ್ಲದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.