ನಾಡಕಾರ್ಯಾಲಯಕ್ಕೆ ಸಿಕ್ಕೀತೆ ನವೀನ ಕಟ್ಟಡ?

7

ನಾಡಕಾರ್ಯಾಲಯಕ್ಕೆ ಸಿಕ್ಕೀತೆ ನವೀನ ಕಟ್ಟಡ?

Published:
Updated:
ನಾಡಕಾರ್ಯಾಲಯಕ್ಕೆ ಸಿಕ್ಕೀತೆ ನವೀನ ಕಟ್ಟಡ?

ಡಂಬಳ: ಕಳೆದ ಎರಡು ಮೂರು ದಶಕ ಗಳಿಂದ ನಾಡಕಾರ್ಯಲಯ ತಗಡಿನ ಚಾವಣಿ ಹೊಂದಿರುವ ಬಾಡಿಗೆ ಕಟ್ಟಡ ದಲ್ಲಿ ಕಾರ್ಯನಿರ್ವಹಿಸುತ್ತಿದ್ದು  ಕಟ್ಟಡ ನಿರ್ಮಾಣಕ್ಕೆ ಪಂಚಾಯಿತಿಯ ಜಾಗ ಇದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಅಲೆಯಬೇಕಾದ ಸ್ಥಿತಿ ಇದೆ. 

ಉಪತಹಶೀಲ್ದಾರ್, ಕಂದಾಯ ನೀರಿಕ್ಷಕ, ಗ್ರಾಮ ಲೆಕ್ಕಾಧಿಕಾರಿ ಮುಂತಾದ ಕಚೇರಿ ಗಳು ಒಂದು ಸೂರಿನಡಿಯಲ್ಲಿ ಲಭ್ಯ ಆಗು ವಂತೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿದರೆ ಅನಕೂಲವಾಗುತ್ತದೆ ಎನ್ನು ವುದು ಹೋಬಳಿ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯವಾಗಿದೆ.

ಡಂಬಳ ಹೋಬಳಿ ವ್ಯಾಪ್ತಿಯಲ್ಲಿ  ಡೋಣಿ, ಚಿಕ್ಕವಡ್ಡಟ್ಟಿ, ಹಳ್ಳಿಗುಡಿ, ಗುಡ್ಡದ ಬೂದಿಹಾಳ, ವೆಂಕಟಾಪುರ, ಡೋಣಿ ತಾಂಡ,  ಮೇವುಂಡಿ,  ಹಿರೇವಡ್ಡಟ್ಟಿ ಸೇರಿ 28 ಗ್ರಾಮಗಳು ಬರುತ್ತವೆ. ಆಧಾರ ಕಾರ್ಡ್ ಪಹಣಿ ಪತ್ರ ಜನನ ಮರಣ ಜಾತಿ ಆದಾಯ ವಿವಿಧ ಸೇವೆಗಳನ್ನು ಪಡೆಯಲು ಜನರು ಬಿಸಿಲಿನಲ್ಲಿ ಸಾಲು ಗಟ್ಟಿ ನಿಲ್ಲಬೇಕಾದ ಸ್ಥಿತಿ ಇದೆ. 

ಮಳೆಗಾಲದಲ್ಲಿ ಸೋರುವುದರಿಂದ ಅಮೂಲ್ಯ, ಅಗತ್ಯ ದಾಖಲೆಗಳು ನಶಿಸುವ ಸಾಧ್ಯತೆ ಇದೆ ಗ್ರಾಮ ಪಂಚಾಯತಿಯು 1ನೇ ವಾರ್ಡಿನಲ್ಲಿ ಆಸ್ತಿಯ ಅ. ಸಂ. 1546 ಹಾಗೂ ಆಸ್ತಿ ನಂಬರ್ 1432 ನಾಡ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ 100X100 ಅಳತೆಯ ಜಾಗವನ್ನು ಕಾಯ್ದಿರಿಸಿದೆ  ಒಂದೆ ಸೂರಿನಡಿಯಲ್ಲಿ ವಿವಿಧ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಜನಪ್ರತಿನಿಧಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ  ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಡಂಬಳ ತಾಲಕು ಹೋರಾಟ ಸಮಿತಿ ಅಧ್ಯಕ್ಷ  ಈರಣ್ಣ ನಂಜಪ್ಪನವರ  ಹಾಗೂ ಜಾಕೀರ್ ಮೂಲಿಮನಿ.

ಬಾಡಿಗೆ ಕಟ್ಟಡದಲ್ಲಿ ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ ಹೀಗಾಗಿ, ಸಿಬ್ಬಂದಿ ಸಾರ್ವಜನಿಕರು ಪರದಾಟ ಪಡುವಂತಾಗಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರದ ಮುಂದೆ ನೆರಳಿನ ವ್ಯವಸ್ಥೆ ಇಲ್ಲದೆ ಇರುವದರಿಂದ ಜನರು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದ್ದು ಮೂಲಸೌಲಭ್ಯ ಕೊರತೆಯಿಂದ ವಂಚಿತವಾಗಿದ್ದಾರೆ.

ಹಲವು ಕೆಲಸಗಳಿಗಾಗಿ ನಿತ್ಯ ವಿವಿಧ ಗ್ರಾಮಗಳಿಂದ ಆಗಮಿಸುವ ನೂರಾರು ಜನ ಒಂದೊಂದು ದಿಕ್ಕಿನಲ್ಲಿ ಇರುವ ಉಪತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಹಾಗೂ ಕಂದಾಯ ನಿರೀಕ್ಷಕರ ಕಚೇರಿ ಗಳಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ. 

ಸರ್ಕಾರದ ದುಡ್ಡು ಬಾಡಿಗೆ ಕಟ್ಟಡಕ್ಕೆ ಹೋಗುವುದನ್ನು ತಡೆದು ನಿಗದಿತ ನಿವೇಶನದಲ್ಲಿ ನಾಡಕಾರ್ಯಾಲಯದ ಹೊಸಕಟ್ಟಡ ನಿರ್ಮಿಸಲು ಅಗತ್ಯ ಅನು ದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್. ಬಂಡಿ ಹಾಗೂ ಮಾರುತಿ ಹೊಂಬಳ ಆಗ್ರಹಿಸಿದ್ದಾರೆ.

* * 

ನಾಡ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ  ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಅನುದಾನ ಬಿಡುಗಡೆಯಾದರೆ ಶೀಘ್ರವೇ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು

ಭ್ರಮರಾಂಬಾ ಗುಬ್ಬಿಶೆಟ್ಟಿ

ತಹಶೀಲ್ದಾರ್


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry