ಹೆದ್ದಾರಿಯ ಇಕ್ಕೆಲ– ಕಸದಿಂದ ಮುಕ್ತ

7

ಹೆದ್ದಾರಿಯ ಇಕ್ಕೆಲ– ಕಸದಿಂದ ಮುಕ್ತ

Published:
Updated:
ಹೆದ್ದಾರಿಯ ಇಕ್ಕೆಲ– ಕಸದಿಂದ ಮುಕ್ತ

ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮತ್ತು ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆಗೆಯುವ ಮೂಲಕ ವಿಶ್ವ ಪರಿಸರ ದಿನವನ್ನು ವಿನೂತನವಾಗಿ ಆಚರಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. 

ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮೀಜಿ ಏಕಗಮ್ಯಾನಂದ ಜೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಎಂ. ಆರ್.ರವಿ, ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ವಯಂಸೇವಾ ಸಂಸ್ಥೆಗಳು, ವಿದ್ಯಾ ಸಂಸ್ಥೆ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು ಪಾಲ್ಗೊಂಡಿದ್ದರು.

ಮಂಗಳೂರು ತಾಲ್ಲೂಕಿನ ತಲ ಪಾಡಿ, ಸೋಮೇಶ್ವರ, ಮುನ್ನೂರು, ಬೆಳ್ಮ, ಕೊಣಾಜೆ, ಮಂಜನಾಡಿ, ಮಳ ವೂರು, ಅಡ್ಯಾರ್, ನೀರುಮಾರ್ಗ, ಬಜ್ಪೆ, ಗುರುಪುರ, ಕಂದಾವರ, ಪುತ್ತಿಗೆ, ಪಡುಪೆರಾರ, ಗಂಜಿಮಠ, ಎಡಪದವು, ಬಡಗಎಡಪದವು, ತೆಂಕಮಿಜಾರು, ಕುಪ್ಪೆಪದವು ಗ್ರಾಮ ಪಂಚಾಯಿತಿಗಳು, ಬಂಟ್ವಾಳ ತಾಲ್ಲೂಕಿನ ಕುರ್ನಾಡು, ಗೋಳ್ತಮಜಲು, ಕಳ್ಳಿಗೆ, ಪುದು, ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾ ರ್ಯಕ್ರಮ ನಡೆಯಿತು. 

ರಸ್ತೆ ಬದಿಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿದ ನಂತರ, ಆ ಸ್ಥಳ ದಲ್ಲಿ ಅರಣ್ಯ ಇಲಾಖೆಯಿಂದ ಒದಗಿಸಿದ ಸಸಿಗಳನ್ನು ನೆಟ್ಟು, ಸ್ವಚ್ಛತೆ ಕಾಪಾಡಲು ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಕೋಟೆಕಾರು ಪಟ್ಟಣ ಪಂಚಾ ಯಿತಿ ಮತ್ತು ಬಂಟ್ವಾಳ ನಗರಸಭೆ, ಮಂಗಳೂರು ಮತ್ತು ಬಂಟ್ವಾಳ ತಾಲ್ಲೂ ಕಿನ 25 ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯಲ್ಲಿ ಆಂದೋಲನ ನಡೆಯಿತು.

2,500 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನರು ಶ್ರಮದಾನದಲ್ಲಿ ಪಾಲ್ಗೊಂಡರು. 10 ಜೆಸಿಬಿ ಮತ್ತು 35 ಲಾರಿಗಳಲ್ಲಿ 65 ಲೋಡ್ ಕಸವನ್ನು ವಿಲೇವಾರಿ ಮಾಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

* *

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಕಸ ಸುರಿಯುವುದು ಅಪರಾಧವಾಗಿದ್ದು, ಕಸ ಸ್ವಚ್ಛಗೊಳಿಸಿ, ಫಲಕವನ್ನು ಅಳವಡಿಸಲಾಗಿದೆ.

ಮೀನಾಕ್ಷಿ ಶಾಂತಿಗೋಡು

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry