ಇನ್ಫೊಸಿಸ್ ಷೇರು ಮೌಲ್ಯ ಶೇಕಡ 3.5ರಷ್ಟು ಕುಸಿತ

7

ಇನ್ಫೊಸಿಸ್ ಷೇರು ಮೌಲ್ಯ ಶೇಕಡ 3.5ರಷ್ಟು ಕುಸಿತ

Published:
Updated:
ಇನ್ಫೊಸಿಸ್ ಷೇರು ಮೌಲ್ಯ ಶೇಕಡ 3.5ರಷ್ಟು ಕುಸಿತ

ಬೆಂಗಳೂರು: ಕಂಪೆನಿಯ ಸಂಸ್ಥಾಪಕರೆಲ್ಲ ತಮ್ಮ ಪಾಲಿನ ಷೇರನ್ನು ಮಾರಾಟ ಮಾಡಲಿದ್ದಾರೆ ಎಂಬ ವರದಿಗಳ ಪರಿಣಾಮವಾಗಿ ಇನ್ಫೊಸಿಸ್‌ ಷೇರುಗಳ ಮೌಲ್ಯದಲ್ಲಿ ಶುಕ್ರವಾರ ಶೇಕಡ 3.5ರಷ್ಟು ಕುಸಿತವಾಗಿದೆ. ಇನ್ಫೊಸಿಸ್‌ನ ಷೇರು ಮೌಲ್ಯದಲ್ಲಿ ಇಷ್ಟೊಂದು ಪ್ರಮಾಣದ ಕುಸಿತವಾಗಿರುವುದು ಮೇ 5ರ ನಂತರ ಇದೇ ಮೊದಲಾಗಿದೆ.

ಸುಮಾರು ₹ 28,000 ಕೋಟಿ ಮೌಲ್ಯದ, ಶೇಕಡ 12.75ರಷ್ಟು ಷೇರುಗಳನ್ನು ಕಂಪೆನಿಯ ಸಂಸ್ಥಾಪಕರು ಮಾರಾಟ ಮಾಡಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ, ಈ ವರದಿಯನ್ನು ನಿರಾಕರಿಸಿ ಕಂಪೆನಿಯ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆಯನ್ನೂ ಪತ್ರಿಕೆ ಪ್ರಕಟಿಸಿತ್ತು.

ಕಂಪೆನಿ ಸ್ಪಷ್ಟನೆ: ‘ಸಂಸ್ಥಾಪಕರೆಲ್ಲ ಷೇರು ಮಾರಾಟ ಮಾಡಲಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಸ್ಪಷ್ಟನೆ ನೀಡಲು ಇನ್ಫೊಸಿಸ್ ಬಯಸುತ್ತಿದೆ. ಮಾಧ್ಯಮಗಳ ವರದಿಯನ್ನು ಸಂಸ್ಥಾಪಕರು ಈಗಾಗಲೇ ನಿರಾಕರಿಸಿದ್ದಾರೆ’ ಎಂದು ಇನ್ಫೊಸಿಸ್ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry