ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ–ಅಧ್ಯಾತ್ಮ ಜತೆಗಿದ್ದರೆ ಉತ್ತಮ ಜೀವನ

Last Updated 9 ಜೂನ್ 2017, 11:14 IST
ಅಕ್ಷರ ಗಾತ್ರ

ಕೋಲಾರ: ‘ವಿಜ್ಞಾನ ಮತ್ತು ಅಧ್ಯಾತ್ಮ ಜತೆಯಲ್ಲಿ ಇದ್ದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು’ ಎಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದಲ್ಲಿ ಗುರುವಾರ ಪ್ರಕೃತಿ ಸಮೂಹ ವಿದ್ಯಾಸಂಸ್ಥೆಗಳ ನೂತನ ಕಾಲೇಜು ಹಾಗೂ ಸಿ.ಬೈರೇಗೌಡ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 8ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

‘ವಿಜ್ಞಾನವು ಜಗತ್ತಿನ ವಸ್ತುಗಳ ಕುರಿತು ಅರಿವು ನೀಡಿದರೆ ಅಧ್ಯಾತ್ಮ ನಮ್ಮನ್ನು ನಾವು ಅರಿತುಕೊಳ್ಳುವುದನ್ನು ತಿಳಿಸುತ್ತದೆ. ಹೀಗಾಗಿ ಮನುಷ್ಯನ ಉತ್ತಮ ಜೀವನಕ್ಕೆ ವಿಜ್ಞಾನ, ಅಧ್ಯಾತ್ಮ ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ದೆಹಲಿಯಲ್ಲಿ ಮಠದಿಂದ ಈಗಾಗಲೇ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಹಲವು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ಬೆಂಗಳೂರಿನ ವಿಜಯನಗರದಲ್ಲೂ ತರಬೇತಿ ಕೇಂದ್ರ ತೆರೆಯಲಾಗುತ್ತದೆ.  ಆಸಕ್ತಿ ಅಭ್ಯರ್ಥಿಗಳು ಕೇಂದ್ರಕ್ಕೆ ದಾಖ ಲಾಗಬಹುದು’ ಎಂದು ತಿಳಿಸಿದರು.

ಪುಸ್ತಕದ ಬದನೆಕಾಯಿ: ‘ಜಗತ್ತಿನ ಶ್ರೇಯಸ್ಸು ಬಯಸುವ ವ್ಯಕ್ತಿ ವಿಶ್ವ ಮಾನವನಾಗುತ್ತಾನೆ. ಕಲಿಕೆ ನಿತ್ಯದ ಬದುಕಾಗಬೇಕು. ಜತೆಗೆ ಜೀವನದ ಚಿಲುಮೆ ಆಗಬೇಕು. ಆಧುನಿಕ ಜಗತ್ತಿನಲ್ಲಿ ಶಿಕ್ಷಣವೊಂದೇ ಮುಖ್ಯವಲ್ಲ. ಪುಸ್ತಕದ ಬದನೆಕಾಯಿ ಸಮಾಜಕ್ಕೆ ಒಳಿತು ಮಾಡುವುದಿಲ್ಲ. ವಿದ್ಯೆ ಜತೆಗೆ ಅಧ್ಯಾತ್ಮ ಮತ್ತು ಮಾನವೀಯ ಮೌಲ್ಯ  ರೂಢಿಸಿಕೊಂಡಾಗ ಅರ್ಥ ಸಿಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಬರದಿಂದ ಜನಜೀವನಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಆದರೆ, ಇಲ್ಲಿ ಪ್ರತಿಭಾವಂತರಿಗೆ ಬರವಿಲ್ಲ. ಕೆಲ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ. ಜನಪ್ರತಿನಿಧಿಗಳು ಶಿಕ್ಷಣದಿಂದ ವಂಚಿತರಾಗಿರುವ ಮಕ್ಕ ಳನ್ನು ಗುರುತಿಸಿ ಕೇಂದ್ರಕ್ಕೆ ಕರೆದು ಕೊಂಡು ಬಂದರೆ ಶಿಕ್ಷಣ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ನೀರಿನ ಸಮಸ್ಯೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಐಎಎಸ್, ಕೆಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ತೋರುತ್ತಿದ್ದಾರೆ.

ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸುವುದು ಒಳ್ಳೆಯದು’ ಎಂದರು. ‘ಎತ್ತಿನಹೊಳೆ ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಕೆಲ ರಾಜಕೀಯ ಮುಖಂಡರು, ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಅನುದಾನ ಲೂಟಿ ಮಾಡುತ್ತಿದ್ದರೂ ಕೇಳುವವರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣಕ್ಕೆ ಒತ್ತು ಕೊಡಿ: ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ‘ನೀರಿಲ್ಲದೆ ಸಾಕಷ್ಟು ಕಷ್ಟ ಎದುರಿಸುತ್ತಿರುವ ನಮಗೆ ಶಿಕ್ಷಣವೇ ಅಭಿವೃದ್ಧಿಯ ಮಾರ್ಗ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ಬರಪೀಡಿತ ಜಿಲ್ಲೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 92ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಉಚಿತವಾಗಿ ಪಿಯುಸಿ ಶಿಕ್ಷಣ ನೀಡಲಾಗುತ್ತದೆ’ ಎಂದು ಪ್ರಕೃತಿ ಸಮೂಹ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಪ್ರಕಟಿಸಿದರು. ಸಂಸ್ಥೆ ಅಧ್ಯಕ್ಷ ಎ.ಪ್ರಭಾಕರರೆಡ್ಡಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ  ಪಾಲ್ಗೊಂಡಿದ್ದರು.

* * 

ಸಮಾಜದ ದಿಕ್ಕು ತಪ್ಪಿಸು ವವರು ಬೇಕಾಗಿಲ್ಲ. ಸಂಸ್ಕೃತಿ ಯನ್ನೇ ಜೀವನ ಎಂದು ಪರಿಗಣಿಸಿ ಹೃದಯ ವೈಶಾಲ್ಯಉಳ್ಳವರು ಬೇಕು. ಶಿಕ್ಷಕರು ಅಂತಹ ವಿದ್ಯಾರ್ಥಿಗಳನ್ನು ರೂಪಿಸಲು ಮುಂದಾಗಬೇಕು 
ನಿರ್ಮಲಾನಂದನಾಥ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT