ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ದ್ವಿಗುಣ

7

ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ದ್ವಿಗುಣ

Published:
Updated:
ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ದ್ವಿಗುಣ

ನವದೆಹಲಿ: ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ಈಗಿರುವುದಕ್ಕಿಂತ ದ್ವಿಗುಣಗೊಳ್ಳಲಿದೆ ಎಂದು ಜಾಗತಿಕ ನೆಟ್‌ವರ್ಕಿಂಗ್ ಕಂಪೆನಿ ಸಿಸ್ಕೊದ ‘ವಿಶುವಲ್ ನೆಟ್‌ವರ್ಕಿಂಗ್ ಇಂಡೆಕ್ಸ್, ಕಂಪ್ಲೀಟ್ ಫಾರ್‌ಕಾಸ್ಟ್’ ಎಂಬ ವರದಿ ಹೇಳಿದೆ.

2016ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 37.3 ಕೋಟಿ (ದೇಶದ ಒಟ್ಟು ಜನಸಂಖ್ಯೆಯ 28%) ಅಂತರ್ಜಾಲ ಬಳಕೆದಾರರಿದ್ದಾರೆ. 2021ರ ವೇಳೆಗೆ ಇದು 82.9 ಕೋಟಿ (ದೇಶದ ಒಟ್ಟು ಜನಸಂಖ್ಯೆಯ 59%) ಆಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಭಾರತದಲ್ಲಿ ಮೊಬೈಲ್ ಸಂಪರ್ಕ, ಸಂಪರ್ಕ ಸಾಧನಗಳು ಮತ್ತು ಜನರ ಕಂಪ್ಯೂಟಿಂಗ್ ಸಾಮರ್ಥ್ಯ ಮಾತ್ರ ಹೆಚ್ಚುತ್ತಿರುವುದಲ್ಲ. ಜತೆಗೆ 3ಜಿ, 4ಜಿ, ಎಲ್‌ಟಿಇ ಅಂತರ್ಜಾಲ ಸಂಪರ್ಕವೂ ದೊರೆಯಲಾರಂಭವಾಗಿದೆ. ಇದು ಅಂತರ್ಜಾಲ ಬಳಕೆ ಹೆಚ್ಚಳಕ್ಕೆ ನೆರವಾಗಲಿದೆ.’ ಎಂದು ಸಿಸ್ಕೊದ ಭಾರತ ಘಟಕದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry