ರೈಲು ನಿಲ್ದಾಣವನ್ನೇ ವರಿಸಿದ್ದಾಳೆ ಈಕೆ

7

ರೈಲು ನಿಲ್ದಾಣವನ್ನೇ ವರಿಸಿದ್ದಾಳೆ ಈಕೆ

Published:
Updated:
ರೈಲು ನಿಲ್ದಾಣವನ್ನೇ ವರಿಸಿದ್ದಾಳೆ ಈಕೆ

ಅಂತೂ ಇಂತೂ ಆ ಜೋಡಿಯ 36 ವರ್ಷದ ಪ್ರೀತಿ ಫಲಿಸಿದೆ. ಕ್ಯಾಲಿಫೋರ್ನಿಯಾದ ಕರೋಲ್ ಸೇಂಟ್ ತನ್ನ ಪ್ರೀತಿಯ ದಾಯಿದ್ರ ಜೊತೆ ಮದುವೆ ಆಗಿದ್ದಾಳೆ. ಇದರಲ್ಲೇನಿದೆ ವಿಶೇಷ ಎಂದು ನೀವು ಯೋಚಿಸಬಹುದು.

ಕತೆಯಲ್ಲಿ ಇಲ್ಲೇ ಟ್ವಿಸ್ಟ್ ಇರುವುದು. ದಾಯಿದ್ರ ಅಂದರೆ ಯಾವುದೋ ಹುಡುಗಿ ಅಥವಾ ಹುಡುಗ ಅಲ್ಲ. ಆದು ಸಾಂಟಾ ಫೆ ರೈಲು ನಿಲ್ದಾಣ! ದಾಯಿದ್ರ ಈಕೆ ಕೊಟ್ಟಿರುವ ಹೆಸರು.

ಕರೋಲ್ ಸೇಂಟ್ ಅವರು ಸಾಂಟಾ ಫೆ ರೈಲು ನಿಲ್ದಾಣಕ್ಕೆ ತಮ್ಮ ಒಂಭತ್ತನೇ ವಯಸ್ಸಿನಿಂದ ಬರುತ್ತಿದ್ದಾರಂತೆ. ಆಗನಿಂದಲೂ ಇವರಿಗೆ ರೈಲು ನಿಲ್ದಾಣದ ಮೇಲೆ ವಿಪರೀತ ಪ್ರೀತಿ. ರೈಲು ನಿಲ್ದಾಣವನ್ನು ಮದುವೆ ಆಗುವುದಕ್ಕೂ ಮೊದಲು ಟಾಮ್ ಎಂಬುವರನ್ನು ವರಿಸಿದ್ದರಂತೆ. ಆದರೆ, ಇಬ್ಬರ ಮಧ್ಯೆ ಸಂಬಂಧ ಸರಿಹೊಂದಲಿಲ್ಲ. 18 ತಿಂಗಳು ಮಾತ್ರ ಅವರು ಜೊತೆಯಾಗಿದ್ದರು.

ತಮ್ಮ ಪ್ರೀತಿಯ ರೈಲು ನಿಲ್ದಾಣವನ್ನು ನೋಡುವುದಕ್ಕಾಗಿ ಕರೋಲ್ ಸೇಂಟ್ ಅವರು ಪ್ರತಿ ದಿನ ಬರುತ್ತಾರೆ. ಯಾರೂ ಇಲ್ಲದ ಸಮಯದಲ್ಲಿ ಸೈಕಲ್‌ನಲ್ಲಿ ಇಡೀ ನಿಲ್ದಾಣವನ್ನು ಒಂದು ಸುತ್ತು ಸುತ್ತಿ ಯಾರೂ ನಿಲ್ದಾಣಕ್ಕೆ ತೊಂದರೆ ಕೊಡದಂತೆ ನೋಡಿಕೊಳ್ಳುತ್ತಾರಂತೆ. ಅವರಿಗೆ ತಮ್ಮ ಮತ್ತು ನಿಲ್ದಾಣದ ಸಂಬಂಧವನ್ನು ಎಲ್ಲರ  ಮುಂದೆ ತೋರಿಸಲು ಇಷ್ಟವಿಲ್ಲವಂತೆ.

**

ನೀರಿನಾಳದ ಶಿಲ್ಪ

ಬಹಾಮಾ ದ್ವೀಪದ ನ್ಯೂ ಪ್ರಾವಿಡೆನ್ಸ್‌ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ನಿರ್ಮಿಸಲಾಗಿರುವ ಶಿಲ್ಪ ಪ್ರಪಂಚದಲ್ಲಿಯೆ ಅತಿ ದೊಡ್ಡ ನೀರಿನಾಳದ ಶಿಲ್ಪ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಜಾಸನ್‌ ಡಿಕೈರೀಸ್ ಟೈಲರ್‌ ಎಂಬಾತ ನಿರ್ಮಿಸಿರುವ ಬಾಲಕಿಯೊಬ್ಬಳನ್ನು ಹೋಲುವ ಈ ಶಿಲ್ಪವು 18 ಅಡಿ ಎತ್ತರವಿದ್ದು 60ಟನ್ ತೂಕವಿದೆ. ಇದಕ್ಕೆ ‘ಓಷನ್ ಅಟ್ಲಾಸ್‌’ ಎಂದು ಹೆಸರಿಡಲಾಗಿದೆ.

**

ತಿಳಿ ನೀರ ತೊಟ್ಟಿಲಲಿ...

ಅಮೆರಿಕದ ಮೌಂಟಾನಾ ರಾಜ್ಯದಲ್ಲಿನ ಫ್ಲಾಥೆಡ್ ಲೇಕ್‌ ಪ್ರಪಂಚದ ಅತಿ ದೊಡ್ಡ ತಿಳಿ ನೀರಿನ ಸರೋವರ ಎಂದು ಹೆಸರು ಪಡೆದಿದೆ. ಈ ಸರೋವರದ ತಳದಲ್ಲಿರುವ ವಸ್ತುಗಳು ದಡದಲ್ಲಿರುವವರಿಗೆ ಕಾಣುವಷ್ಟು ಇಲ್ಲಿನ ನೀರು ತಿಳಿ. ಪ್ರವಾಸಿಗರು ಹೆಚ್ಚಾಗಿ ಸರೋವರಕ್ಕೆ ಹಾನಿಯಾಗಬಾರದೆಂಬ ಕಾರಣಕ್ಕೆ ಸ್ಥಳೀಯ ಸರ್ಕಾರ ಪ್ರವಾಸಿಗರನ್ನು ನೀರಿಗಿಳಿಯದಂತೆ ನಿರ್ಬಂಧ ಹೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry