ಅಹುಜಾ ಏನಾಗ್ಬೇಕು ಸೋನಂ?

7

ಅಹುಜಾ ಏನಾಗ್ಬೇಕು ಸೋನಂ?

Published:
Updated:
ಅಹುಜಾ ಏನಾಗ್ಬೇಕು ಸೋನಂ?

ಬಳುಕು ಸುಂದರಿ, ನಟಿ ಸೋನಂ ಕಪೂರ್ ಶುಕ್ರವಾರ 32ರ ಹರೆಯಕ್ಕೆ ಕಾಲಿಟ್ಟರು. ಹುಟ್ಟುಹಬ್ಬಕ್ಕೆ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರಿಂದ ಶುಭಾಶಯಗಳ ಸುರಿಮಳೆಯೇ ಸೋನಂಗೆ ಸುರಿದಿದೆ.

ವಿಷಯ ಇದಲ್ಲ. ಹುಟ್ಟುಹಬ್ಬದ ಆಚರಣೆಯಲ್ಲಿ ಸೋನಂ ಉದ್ಯಮಿ ಆನಂದ್‌ ಅಹುಜಾ ಜತೆ ಕಾಣಿಸಿಕೊಂಡಿರುವುದು.

ಆನಂದ್ ಈಗಾಗಲೇ ತಮ್ಮ  ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೋನಂ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಮತ್ತೀಗ ಹುಟ್ಟುಹಬ್ಬದ ಸಂದರ್ಭದಲ್ಲೂ ಸೋನಂ ಜತೆಯಲ್ಲಿ ಕಾಣಿಸಿಕೊಂಡಿರುವುದು ಅವರಿಬ್ಬರ ಸಂಬಂಧದ ಬಗ್ಗೆ ಇದ್ದ ಗಾಳಿಸುದ್ದಿಯನ್ನು ಗಟ್ಟಿ ಮಾಡುವಂತಿದೆ ಎನ್ನಲಾಗುತ್ತಿದೆ. ‘ಅಹುಜಾ ಏನಾಗ್ಬೇಕು ಸೋನಂ’ ಎಂಬ ಖುಲ್ಲಂಖುಲ್ಲ ಪ್ರಶ್ನೆಗೂ ಸೋನಂ ಮಾತ್ರವಲ್ಲ, ಅಹುಜಾ ಸಹ ತುಟಿ ಬಿಚ್ಚಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry