ಮ್ಯಾನ್ಮಾರ್‌: ನಾಗ ಬಂಡುಕೋರರ ನಾಯಕ ಎಸ್‌.ಎಸ್‌. ಖಪ್ಲಾಂಗ್‌ ನಿಧನ

7

ಮ್ಯಾನ್ಮಾರ್‌: ನಾಗ ಬಂಡುಕೋರರ ನಾಯಕ ಎಸ್‌.ಎಸ್‌. ಖಪ್ಲಾಂಗ್‌ ನಿಧನ

Published:
Updated:
ಮ್ಯಾನ್ಮಾರ್‌: ನಾಗ ಬಂಡುಕೋರರ ನಾಯಕ ಎಸ್‌.ಎಸ್‌. ಖಪ್ಲಾಂಗ್‌ ನಿಧನ

ನವದೆಹಲಿ: ನಾಗ ಬಂಡುಕೋರರ ನಾಯಕ, ನಿಷೇಧಿತ ಎನ್‌ಎಸ್‌ಸಿಎನ್‌ ಮುಖ್ಯಸ್ಥ ಎಸ್‌.ಎಸ್‌. ಖಪ್ಲಾಂಗ್‌ ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಮೃತಪಟ್ಟಿದ್ದಾನೆ. 

ನಿಷೇಧಿತ ನ್ಯಾಷನಾಲಿಸ್ಟ್ ಸೋಸಿಯಾಲಿಸ್ಟ್ ಕೌನ್ಸಿಲ್‌ ಆಫ್‌ ನಾಗಾಲ್ಯಾಂಡ್‌ -ಖಪ್ಲಾಂಗ್(ಎನ್‌ಎಸ್‌ಸಿಎನ್‌(ಕೆ) ಸಂಘಟನೆಯ ಮುಖ್ಯಸ್ಥನಾಗಿದ್ದ ಖಪ್ಲಾಂಗ್‌ ಮ್ಯಾನ್ಮಾರ್‌ನ ಸಾಗಾಂಗ್‌ ಪ್ರಾಂತ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ವರಿಯಾಗಿದೆ.

ಖಪ್ಲಾಂಗ್‌ಗೆ 77 ವರ್ಷ ವಯಸ್ಸಾಗಿತ್ತು. 1940ರ ಏಪ್ರಿಲ್‌ನಲ್ಲಿ ಮಯುನ್ಮಾರ್‌ನ ಸಾಗಾಂಗ್‌ ಪ್ರಾಂತ್ಯದ ವಕ್ಥಮ್‌ ಗ್ರಾಮದಲ್ಲಿ ಖಪ್ಲಾಂಗ್‌ ಜನಿಸಿದ್ದ.

ಖಪ್ಲಾಂಗ್‌ ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ವೆಸ್ಟ್ರನ್‌ ಸೌತ್‌ ಈಸ್ಟ್‌ ಏಷ್ಯಾ(ಯುಎನ್‌ಎಲ್‌ಎಫ್‌ಡಬ್ಲ್ಯು) ಸಂಘಟನೆಯನ್ನೂ ಮುನ್ನಡೆಸುತ್ತಿದ್ದ.

ಮಣಿಪುರದಲ್ಲಿ 18 ಭಾರತೀಯ ಯೋಧರನ್ನು ಅಮಾನುಷವಾಗಿ ಹತ್ಯೆಗೈದ ನಾಗಾ ಬಂಡುಕೋರರ ಸಂಘಟನೆ ಎನ್ಎಸ್‌ಸಿಎನ್‌(ಕೆ) ಅನ್ನು ಭಾರತ ಸರ್ಕಾರ ಐದು ವರ್ಷ ನಿಷೇಧಿಸಿ 2015ರಲ್ಲಿ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry