ಅರ್ಜುನ ಪ್ರಶಸ್ತಿ: ಬೋಪಣ್ಣ ಹೆಸರು ಶಿಫಾರಸು

7

ಅರ್ಜುನ ಪ್ರಶಸ್ತಿ: ಬೋಪಣ್ಣ ಹೆಸರು ಶಿಫಾರಸು

Published:
Updated:
ಅರ್ಜುನ ಪ್ರಶಸ್ತಿ: ಬೋಪಣ್ಣ ಹೆಸರು ಶಿಫಾರಸು

ನವದೆಹಲಿ: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ರೋಹನ್ ಬೋಪಣ್ಣ ಅವರಿಗೆ ಅರ್ಜುನ ಪ್ರಶಸ್ತಿ ನೀಡಬೇಕು ಎಂದು ಭಾರತ ಟೆನಿಸ್ ಸಂಸ್ಥೆಯು (ಎಐಟಿಎ) ಶಿಫಾರಸು ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಬೋಪಣ್ಣ ಕೆನಡಾದ ಗ್ಯಾಬ್ರಿಯೆಲಾ ದಬೋವ್ಸ್‌ಕಿ ಅವರೊಂದಿಗೆ ಪ್ರಶಸ್ತಿ ಗೆದ್ದರು.

‘ಬೋಪಣ್ಣ ಅವರ ಹೆಸರನ್ನು ಈ ಹಿಂದೆಯೂ ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿತ್ತು. ಆದರೆ ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ. ಈಗಲಾದರೂ ಅವರಿಗೆ ಈ ಗೌರವ ಸಲ್ಲಬೇಕು’ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೋನ್ಮಿ ಚಟರ್ಜಿ ಹೇಳಿದ್ದಾರೆ.

‘ಬೋಪಣ್ಣ ಅವರೊಂದಿಗೆ ರುಷ್ಮಿ ಚಕ್ರವರ್ತಿ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry