ಷೇರುಪೇಟೆಯಲ್ಲಿ ಮಾರಾಟದ ಒತ್ತಡ

7

ಷೇರುಪೇಟೆಯಲ್ಲಿ ಮಾರಾಟದ ಒತ್ತಡ

Published:
Updated:
ಷೇರುಪೇಟೆಯಲ್ಲಿ ಮಾರಾಟದ ಒತ್ತಡ

ಮುಂಬೈ : ಐದು ವಾರಗಳ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಶುಕ್ರವಾರ ಇಳಿಮುಖ ಹಾದಿಯಲ್ಲೇ ಸಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ನಡೆದ ಖರೀದಿಯಿಂದ ಸೂಚ್ಯಂಕವನ್ನು ಅಲ್ಪ ಏರಿಕೆ ಕಂಡಿತು.

ಸಂವೇದಿ ಸೂಚ್ಯಂಕ 49 ಅಂಶ ಏರಿಕೆ ಕಂಡು, 31,262 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 21 ಅಂಶ ಏರಿಕೆ ಕಂಡು 9,668 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಇನ್ಫೊಸಿಸ್‌ ಸಂಸ್ಥೆಯ ಸಹಸ್ಥಾಪಕರು ತಮ್ಮ ಪಾಲಿನ ಷೇರುಗಳನ್ನು ಮಾರಾಟ ಮಾಡಲಿದ್ದಾರೆ ಎನ್ನುವ ಸುದ್ದಿಯು ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಸಿ, ಸೂಚ್ಯಂಕಗಳನ್ನು ಇಳಿಕೆ ಕಾಣುವಂತೆ ಮಾಡಿತ್ತು.

ಆದರೆ, ಬ್ರಿಟನ್‌ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷ ಗೆಲುವು ಸಾಧಿಸಿರುವುದು ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟಿನ ಚೇತರಿಕೆಗೆ ನೆರವಾಯಿತು. ಇದು ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿ ಸೂಚ್ಯಂಕಗಳನ್ನು ಅಲ್ಪ ಏರಿಕೆ ಕಾಣುವಂತೆ ಮಾಡಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry