ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಜಿಎಸ್‌ಟಿ ಮಂಡಳಿ ಸಭೆ

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಭಾನುವಾರ ಸಭೆ ಸೇರಲಿದ್ದು, ಕೆಲವು ತೆರಿಗೆ ದರಗಳ ಪರಿಶೀಲನೆ ನಡೆಸಲಿದೆ.

‘ಕೆಲವು ತೆರಿಗೆ ದರಗಳ ಪರಿಶೀಲನೆ ನಡೆಸುವಂತೆ ವರ್ತಕರು ಮತ್ತು ಉದ್ಯಮ ವಲಯಗಳು ಒತ್ತಾಯಪಡಿಸಿವೆ. ಹೀಗಾಗಿ ತೆರಿಗೆ ದರಗಳ ಮರುಪರಿಶೀಲನೆ ಮತ್ತು ಜಿಎಸ್‌ಟಿ ಕರಡು ನಿಯಮಗಳಿಗೆ ತಂದಿರುವ ತಿದ್ದುಪಡಿಗೆ ಒಪ್ಪಿಗೆ ನೀಡುವುದು ಸಭೆಯ ಮುಖ್ಯ ಉದ್ದೇಶವಾಗಿದೆ’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಮಧ್ಯಮ ಗಾತ್ರದ ಹೈಬ್ರಿಡ್‌ ಕಾರುಗಳಿಗೆ ಜಿಎಸ್‌ಟಿಯಲ್ಲಿ ಒಟ್ಟು ಶೇ 43 ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಶೇ 30.3ರಷ್ಟಿದೆ. ಹೀಗಾಗಿ ತೆರಿಗೆ ದರ ಪರಿಶೀಲನೆ ಮಾಡುವಂತೆ ವಾಹನ ಉದ್ಯಮ ಬೇಡಿಕೆ ಸಲ್ಲಿಸಿದೆ.

ದೂರಸಂಪರ್ಕ ವಲಯವನ್ನು ಶೇ 18ಕ್ಕಿಂತಲೂ ಕಡಿಮೆ ತೆರಿಗೆ ದರದ ವ್ಯಾಪ್ತಿಗೆ ತರುವಂತೆ ಒತ್ತಾಯ ಕೇಳಿಬಂದಿದೆ.
ಮಾನಿಟರ್‌, ಪ್ರಿಂಟರ್‌ನಂತಹ ವಸ್ತುಗಳಿಗೆ ಶೇ 18ರಷ್ಟು ಏಕರೂಪದ ತೆರಿಗೆ ವಿಧಿಸುವಂತೆ ಐ.ಟಿ ಉದ್ಯಮ ಬೇಡಿಕೆ ಸಲ್ಲಿಸಿದೆ. ಕೆಲವು ವಸ್ತುಗಳಿಗೆ ಶೇ 28ರಷ್ಟು  ತೆರಿಗೆ ವಿಧಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕ್ಲಿಯರ್‌ಟ್ಯಾಕ್ಸ್‌ನಿಂದ  ‘ಜಿಎಸ್‌ಟಿ ತಂತ್ರಾಂಶ’

ಐ.ಟಿ ಲೆಕ್ಕಪತ್ರ ಸಲ್ಲಿಕೆಯ ಅಂತರ್ಜಾಲ ತಾಣವಾಗಿರುವ ‘ಕ್ಲಿಯರ್‌ಟ್ಯಾಕ್ಸ್‌’, ಜಿಎಸ್‌ಟಿ ತಂತ್ರಾಂಶ ಬಿಡುಗಡೆ ಮಾಡಿದೆ.

ಉದ್ಯಮಿಗಳಿಗೆ ‘GST Biz’ ಮತ್ತು ಲೆಕ್ಕಪತ್ರ ಪರಿಶೋಧಕರಿಗೆ GST Pro ಎಂಬ ಪ್ರತ್ಯೇಕ ತಂತ್ರಾಂಶಗಳನ್ನು ಬಿಡುಗಡೆ ಮಾಡಿದೆ.

ವಿತರಕರು ಮತ್ತು ಚಿಲ್ಲರೆ ವರ್ತಕರಿಗೆ  ಐ.ಟಿ ಲೆಕ್ಕಪತ್ರ ಸಲ್ಲಿಕೆಗೆ ‘GST Biz’ ತಂತ್ರಾಂಶ ನೆರವಾಗಲಿದೆ.

‘ಉದ್ಯಮವರ್ಗದ ಜತೆ ಸುದೀರ್ಘ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡಿದ್ದೇವೆ. ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಐ.ಟಿ ರಿಟರ್ನ್ಸ್‌ ಸಲ್ಲಿಕೆ ಸುಲಭಗೊಳಿಸಲಾಗಿದೆ’ ಎಂದು ಕ್ಲಿಯರ್‌ಟ್ಯಾಕ್ಸ್‌ ಸ್ಥಾಪಕ ಅರ್ಚಿತ್‌ ಗುಪ್ತಾ ಅವರು ತಿಳಿಸಿದ್ದಾರೆ.

‘100ಕ್ಕೂ ಹೆಚ್ಚಿನ ನಗರಗಳ 20 ಸಾವಿರಕ್ಕೂ ಅಧಿಕ ಲೆಕ್ಕಪತ್ರ ಪರಿಶೋಧಕರೊಂದಿಗೆ ಸಹಯೋಗ ಹೊಂದಲಾಗಿದೆ. ಲೆಕ್ಕಪರಿಶೋಧಕರು, ವಕೀಲರು ಮತ್ತು ತೆರಿಗೆ ತಜ್ಞರಿಗೆ ಆನ್‌ಲೈನ್‌ ಮೂಲಕ ಜಿಎಸ್‌ಟಿ ತರಬೇತಿಯನ್ನೂ ನೀಡಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT