739 ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲ

7

739 ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲ

Published:
Updated:
739 ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲ

ಚಿತ್ರದುರ್ಗ: ಜಿಲ್ಲೆಯಲ್ಲಿರುವ 1654 ಸರ್ಕಾರಿ ಪ್ರಾಥಮಿಕ ಶಾಲೆಗಳ 8128 ಕಟ್ಟಡಗಳಲ್ಲಿ 739 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಈ ಶಿಥಿಲಗೊಂಡಿರುವ ಕಟ್ಟಡಗಳಲ್ಲಿ ಕೆಲವು ಶತಮಾನ ತುಂಬಿದ ಶಾಲೆಗಳಾಗಿವೆ.

ಕೆಲವು ಕಟ್ಟಡಗಳ ಚಾವಣಿ ಸೋರಿಕೆ, ಗೋಡೆಗಳು ಬಿರುಕು ಬಿಟ್ಟಿದ್ದರೆ, ಇನ್ನೂ ಕೆಲವು ಕಟ್ಟಡಗಳ ಭಾಗವೇ ಕುಸಿದಿದೆ. ಕಿಟಕಿ, ಬಾಗಿಲುಗಳೇ  ಇಲ್ಲದಂತಾಗಿದೆ. ಒಂದಷ್ಟು ಕಟ್ಟಡಗಳನ್ನಂತೂ ದುರಸ್ತಿಗೊಳಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಅಂಥವುಗಳನ್ನು ಸಂಪೂರ್ಣ ಕೆಡವಿಯೇ ಕಟ್ಟಬೇಕಾಗಿದೆ !

ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ರುವುದರಿಂದ ಕೊಠಡಿ ಸಂಖ್ಯೆ ಕಡಿಮೆಯಾಗಿ, ಒಂದೇ ಕೊಠಡಿಯಲ್ಲಿ ಎರಡು ಮೂರು ತರಗತಿಗಳ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ತುರ್ತು ನಿರ್ಮಾಣ: ‘ಜಿಲ್ಲೆಯಲ್ಲಿ ತುರ್ತಾಗಿ 100 ಶಾಲಾ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 44 ಕಟ್ಟಡಗಳನ್ನು ಹೊಸದಾಗಿ ನಿರ್ಮಿಸುವ ಅಗತ್ಯವಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ.

ಚಿತ್ರದುರ್ಗ ತಾಲ್ಲೂಕಿನ ತುರುವನೂರು, ಕೆ.ಬಿ. ಬಡಾವಣೆ, ಭರಮಸಾಗರಲ್ಲಿರುವ ಸರ್ಕಾರಿ ಶಾಲೆಯ ಕೊಠಡಿಗಳು ಹಾಳಾಗಿವೆ. ಹಿರಿಯೂರು ತಾಲ್ಲೂಕಿನ ಶೇಷಪ್ಪನಹಳ್ಳಿ, ವೀರಮ್ಮ ನಾಗತಿಹಳ್ಳಿಯ ಶಾಲೆಗಳಲ್ಲಿನ ಕಟ್ಟಡಗಳು ತುರ್ತು ದುರಸ್ತಿ ಯಾಗಬೇಕಿದೆ.

ಹೊಸದುರ್ಗ ತಾಲ್ಲೂಕಿನ ಅಡವಿಸಂಗೇನಹಳ್ಳಿ, ಹೇರೂರು, ನಾಗತಿಹಳ್ಳಿ, ಸಾಣೇಹಳ್ಳಿ, ಲಕ್ಕಿಹಳ್ಳಿ, ಮೆಂಗಸಂದ್ರ ಶಾಲೆಗಳ ಕಟ್ಟಡ ಶೀಘ್ರ ದುರಸ್ತಿಯಾಗಬೇಕಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಅರೇಹಳ್ಳಿ, ಅಪ್ಪುರಸಹಳ್ಳಿ, ಅಬ್ಬರದಾಸಿಕಟ್ಟೆ, ಬಾಲಿಹಾಳ್, ಹಿರೇಕಂದವಾಡಿ, ಕಲ್ಲವ್ವ ನಾಗತಿಹಳ್ಳಿ, ಎಸ್‌.ಎಚ್‌.ಹಳ್ಳಿಗಳ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ.

ಚಳ್ಳಕೆರೆ ಪಟ್ಟಣದಲ್ಲೇ ಎರಡು ಶಾಲೆಗಳ ಕಟ್ಟಡಗಳು ರಿಪೇರಿಯಾಗ ಬೇಕಿದೆ. ಮದಕರಿನಗರ, ಸೂಜಿ ಮಲ್ಲೇಶ್ವರ ಬಡಾವಣೆ, ವೆಂಕಟೇಶ್ವರ ನಗರ ಹಾಗೂ ಇಮಾಮಪುರದಲ್ಲಿನ ಶಾಲೆಗಳು ಶಿಥಿಲಗೊಂಡಿವೆ.

ಪಿ.ಗೌರಿಪುರ, ಪುಟ್ಲಾರಹಳ್ಳಿ, ಬೆಳೆಗೆರೆಯ  ಶಾಲಾ ಕಟ್ಟಡಗಳು ದುರಸ್ತಿಯಾಗಬೇಕಿದೆ. ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ, ಬಿಜಿ ಕೆರೆ, ಕೊಂಡ್ಲಹಳ್ಳಿ, ರಾಂಪುರ ಭಾಗದಲ್ಲಿ ಶತಮಾನದಷ್ಟು ಹಳೆಯದಾದ ಶಾಲೆಗಳಿವೆ. ಈ ಶಾಲೆಗಳ ಕೆಲವು ಕಟ್ಟಡಗಳು ತೀವ್ರ ಶಿಥಿಲಗೊಂಡಿವೆ. ಅವುಗಳನ್ನು ತುರ್ತಾಗಿ ಪುನರ್ ನಿರ್ಮಿಸುವ ಅಗತ್ಯವಿದೆ.

ಹೊಸ ಶಾಲೆಗಳ ಅಗತ್ಯ: ಜಿಲ್ಲೆಯಲ್ಲಿ ಶಾಲೆಗಳ ಸಂಖ್ಯೆ ಕಡಿಮೆಯಿದ್ದು, ಹಳೆ ಶಾಲಾ ಕಟ್ಟಡಗಳ ಪುನರ್ ನಿರ್ಮಾಣದ ಜತೆಗೆ, ಹೊಸದಾಗಿ 310 ಕೊಠಡಿಗಳನ್ನು ನಿರ್ಮಾಣ ಮಾಡ ಬೇಕಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿಯಿಂದಲೂ ಅನುದಾನ ಕೇಳಲಾಗಿದೆ. ಇಲ್ಲಿವರೆಗೂ ಸರ್ಕಾರದಿಂದಲೂ ಯಾವುದೇ ಉತ್ತರ ಬಂದಿಲ್ಲ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿ ಗಳು ಪರದಾಡುವಂತಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಶಾಲೆಗಳ ಸ್ಥಿತಿಗತಿಯ ವಿವರ

* 1,654 ಜಿಲ್ಲೆಯಲ್ಲಿರುವ ಶಾಲೆಗಳು

* 8,128 ಕೊಠಡಿಗಳ ಸಂಖ್ಯೆ

* 739 ದುರಸ್ತಿಯಾಗಬೇಕಾದ ಕೊಠಡಿಗಳು

* ₹1 ಲಕ್ಷ ಪ್ರತಿ ಕೊಠಡಿ ದುರಸ್ತಿಗೆ

* ₹7.39ಕೋಟಿ ಕೇಳಿರುವ ಅನುದಾನ

* 310 ಹೊಸ ಕೊಠಡಿಗಳ ಸಂಖ್ಯೆ

* ₹8 ಲಕ್ಷ ಪ್ರತಿ ಕೊಠಡಿಗೆ

* ₹24.80 ಕೋಟಿ ಕೇಳಿರುವ ಒಟ್ಟು ಅನುದಾನ

* * 

ಹಳೆಯ ಕಟ್ಟಡಗಳ ದುರಸ್ತಿ, ಪುನರ್ ನಿರ್ಮಾಣ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸಲ್ಲಿಸಿರುವ ಪ್ರಸ್ತಾವಕ್ಕೆ ಶೀಘ್ರ ಅನುಮೋದನೆ ಸಿಗುವ ನಿರೀಕ್ಷೆ ಇದೆ.

ರೇವಣಸಿದ್ದಪ್ಪ,

ಡಿಡಿಪಿಐ, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry