ರಿಲಾಯನ್ಸ್ ಜಿಯೊ ಆಫರ್‌ಗಳು ಸ್ಫರ್ಧಾ ವಿರೋಧಿಯಲ್ಲ: ಸಿಸಿಐ

7

ರಿಲಾಯನ್ಸ್ ಜಿಯೊ ಆಫರ್‌ಗಳು ಸ್ಫರ್ಧಾ ವಿರೋಧಿಯಲ್ಲ: ಸಿಸಿಐ

Published:
Updated:
ರಿಲಾಯನ್ಸ್ ಜಿಯೊ ಆಫರ್‌ಗಳು ಸ್ಫರ್ಧಾ ವಿರೋಧಿಯಲ್ಲ: ಸಿಸಿಐ

ಮುಂಬೈ: ರಿಲಾಯನ್ಸ್ ಜಿಯೊ ದೂರಸಂಪರ್ಕ ಕಂಪೆನಿಯು ಗ್ರಾಹಕರಿಗೆ ನೀಡುತ್ತಿರುವ ಉಚಿತ ಕರೆ ಮತ್ತು ಸಂದೇಶದ ಆಫರ್‌ಗಳು ಸ್ಪರ್ಧಾ ವಿರೋಧಿಯಲ್ಲ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹೇಳಿದೆ.

ಸ್ಪರ್ಧೆ ಮಾಡಲು ಸಾಧ್ಯವಾಗದಂಥ ಆಫರ್‌ಗಳನ್ನು ನೀಡುವ ಮೂಲಕ ಜಿಯೊ ಇತರ ಕಂಪೆನಿಗಳಿಗೆ ಹೊಡೆತ ನೀಡಿದೆ ಎಂದು ಭಾರ್ತಿ ಏರ್‌ಟೆಲ್ ನೀಡಿರುವ ದೂರನ್ನು ಸಿಸಿಐ ತಿರಸ್ಕರಿಸಿದೆ.

ಜಿಯೊ ಹೊಸ ಕಂಪೆನಿಯಾಗಿರುವುದರಿಂದ ಮತ್ತು ದೇಶದ ಮಾರುಕಟ್ಟೆಯಲ್ಲಿ ಬಹಳಷ್ಟು ಪ್ರಭಾವ ಹೊಂದಿಲ್ಲದಿರುವುದರಿಂದ ಅದು ನೀಡಿರುವ ಆಫರ್‌ಗಳನ್ನು ಸ್ಪರ್ಧಾ ವಿರೋಧಿ ಎನ್ನಲಾಗದು ಎಂದು ಸಿಸಿಐ ಹೇಳಿದೆ. ಸಿಸಿಐ ಆದೇಶದ ಕುರಿತು ಪ್ರತಿಕ್ರಿಯೆ ನೀಡಲು ಏರ್‌ಟೆಲ್ ನಿರಾಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry