ಪುಟ್ಟ ಮಳೆ

7

ಪುಟ್ಟ ಮಳೆ

Published:
Updated:
ಪುಟ್ಟ ಮಳೆ

ಪುಟ್ಟ ಪುಟ್ಟ ಮಳೆಯೆ

ನಿಧಾನಕ್ಕೆ ಇಳಿಯೆ|

ನಡೆವುದೀಗ ಕಲಿತಿರುವೆ

ನಿನ್ನ ಬಳಿಗೆ ಬರುವೆ||ಎಳೆಯ ಕಿವಿಯು ನನದು

ಗುಡುಗಬೇಡ ಮಳೆಯೆ|

ನೀರ ಮಣಿಯ ಕಿವಿಯಲಿಟ್ಟು

ಮುತ್ತಿನಂತೆ ಹೊಳೆಯೆ||

ಫಳ ಫಳ ಫಳ ಮಿಂಚಬೇಡ

ನನ್ನ ಹೆಸರೇ ಬೆಳಕು|

ನಿನ್ನ ಜೊತೆಯೆ ಆಡುವೆನು

ಚಿಟ ಪಟ ಹನಿ ಸಾಕು||

ಆಹಾ! ಎಷ್ಟು ಚಂದ ಮಳೆ

ನೆಗೆದು ನೆಗೆದು ಕುಣಿವೆ|

ಅಪ್ಪ ಬಯ್ವೂದಿಲ್ಲ ನನಗೆ

ಅಮ್ಮನಿಗೆ ಮಣಿವೆ|| 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry