ಶಾಲೆಗೆ ಬಂದ ಮಕ್ಕಳು

7

ಶಾಲೆಗೆ ಬಂದ ಮಕ್ಕಳು

Published:
Updated:
ಶಾಲೆಗೆ ಬಂದ ಮಕ್ಕಳು

ರಜೆಯ ಮುಗಿಸಿ

ಮರಳಿ ಶಾಲೆಗೆ

ಬಂದರೆಲ್ಲ ಮಕ್ಕಳುಶಾಲೆಯ ಬಯಲಲ್ಲಿ

ಜ್ಞಾನದ ಬನದಲ್ಲಿ

ಅರಳುವ ಹೂಗಳು

ಬಿಸಿಲಿಗೆ ಬಾಡಿಲ್ಲ

ಲವಲವಿಕೆ ಕುಂದಿಲ್ಲ

ಚೈತನ್ಯದ ಚಿಲುಮೆಗಳು

ಹೊಸ ಸಮವಸ್ತ್ರ ಧರಿಸಿ

ಬೇಧ ಭಾವ ಅಳಿಸುವ

ಒಂದೇ ಬಣ್ಣದ ಚಿಟ್ಟೆಗಳು

ತಾಜಾ ತಾಜಾ ಮನಸ್ಸಿನ

ಘಮ ಘಮವೆನ್ನುವ

ಪುಸ್ತಕದ ಪುಟಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry