‘ಸಿಕ್ಸ್‌ ಟಿ’ಯ ಸಂಕಟ

7

‘ಸಿಕ್ಸ್‌ ಟಿ’ಯ ಸಂಕಟ

Published:
Updated:
‘ಸಿಕ್ಸ್‌ ಟಿ’ಯ ಸಂಕಟ

ಎಷ್ಟೋ ಮಕ್ಕಳು ಯಾಕೋ ನನ್ನ

ಸಿಕ್ ಟಿ! ಸಿಕ್‌ ಟಿ! ಅಂತಾರೆ!

ತುಂಬಾ ತುಂಬಾ ಬೇಜಾರಾಗ್ತಿದೆ

ಜೋರಾಗಳಬೇಕನ್ನಿಸಿದೆ!

ಚೆನ್ನಾಗೇ ನಾನ್‌ ಇದ್ದೀನಲ್ಲ...

ಯಾವುದೇ ರೋಗವೂ ನಂಗಿಲ್ಲ!

ಟೀಯೂ ಅಲ್ಲ, ಕಾಫಿಯೂ ಅಲ್ಲ

ಏನನೂ ಕುಡಿಯುವ ಚಟವಿಲ್ಲ!

ಯಾವ್‌ ಗಳಿಗೇಲಿ ಇಟ್ಟರೋ ನಂಗೆ

‘ಸಿಕ್ಸ್‌ ಟೀ’ ಅನ್ನುವ ಹೆಸರನ್ನ!

ಮಕ್ಕಳ ಬಾಯಿಗೆ ಕಲ್‌ ಸಿಕ್ಕಂತೆ

ತಿನ್ನಲು ಪಾಪ, ಮೊಸರನ್ನ!

  ‘ಕುಡಿಯಲು ಆರು ಟೀ ಕೊಡಿ’ ಅನ್ನೋ

ವಿಪರೀತಾರ್ಥಕೂ ಎಡೆಯುಂಟು!

ಇಂಥ ವಿಚಿತ್ರ ಸಂಕಟದಿಂದ

ಬಿಡಿಸೋರಾದ್ರೂ ಯಾರುಂಟು?

ಎಳೆಯರು ಹೋಗಲಿ, ಹಿರಿಯರಿಗೂನೂ

‘ಸಿಕ್ಸ್‌ ಟೀ’ ಅನ್ನಲು ಮನಸಿಲ್ಲ!

ಸಣ್ಣವರಾಗಿಯೇ ಉಳಿಯುವ ಆಸೆ

ಎಂಥವರನ್ನೂ ಬಿಟ್ಟಿಲ್ಲ!

ಯಾರನು ದೂರಲಿ, ಯಾರಿಗೆ ಹೇಳಲಿ

ನನ್ನೀ ಹೆಸರಿನ ತೊಡಕನ್ನ?

ಲಂಡನ್‌ ಕ್ವೀನಿಗೆ ಈಗಲೇ ಈ ಮೇಲ್‌

ಟೈಪಿಸಿ ಕಳಿಸುವೆ ಮನವೀನ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry