ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದ್ಯೋಗಿಯಿಂದ ಕಿರುಕುಳ ಆರೋಪ: ಪೊಲೀಸ್ ಠಾಣೆಯಲ್ಲಿ ನೇಣಿಗೆ ಶರಣಾದ ಮಹಿಳಾ ಕಾನ್‌ಸ್ಟೆಬಲ್‌

Last Updated 10 ಜೂನ್ 2017, 14:40 IST
ಅಕ್ಷರ ಗಾತ್ರ

ಲೂದಿಯಾನ/ಪಂಜಾಬ್: ಲೂದಿಯಾನ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು ಪೊಲೀಸ್ ಠಾಣೆಯ ಒಂದು ಕೋಣೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಸಹೋದ್ಯೋಗಿಯೊಬ್ಬರ ಕಿರುಕುಳ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ಮಹಿಳಾ ಕಾನ್‌ಸ್ಟೆಬಲ್‌ ಅಮನ್‌ಪ್ರೀತ್‌ ಅವರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಸಹೋದ್ಯೋಗಿ ನಿರ್ಭಯ್‌ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಿರ್ಭಯ್‌ ಸಿಂಗ್ ವಿರುದ್ಧ ಅಮನ್‌ಪ್ರೀತ್‌ ಅವರ ತಂದೆ ದೂರು ನೀಡಿದ್ದಾರೆ.

ಅಮನ್‌ಪ್ರೀತ್‌ ಅವರನ್ನು ಲೂದಿಯಾನ ಗ್ರಾಮಾಂತರ ಜಿಲ್ಲೆಯ ನಿಧನ್ ಪೊಲೀಸ್ ಠಾಣೆಗೆ ನೇಮಿಸಲಾಗಿತ್ತು. ನಿರ್ಭಯ್ ಸಿಂಗ್ ಕೂಡಾ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದರು.

‘ನಿರ್ಭಯ್‌ ಸಿಂಗ್ ಮಗಳಿಗೆ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳಲಾರದೆ ಅವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಅಮನ್ ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT